ಸೋಮವಾರ, ಆಗಸ್ಟ್ 8, 2022
22 °C

ಯೂರೊ ಕಪ್ ಫುಟ್‌ಬಾಲ್‌: ಪ್ರೀಕ್ವಾರ್ಟರ್‌ಫೈನಲ್‌ಗೆ ನೆದರ್ಲೆಂಡ್ಸ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಆ್ಯಮ್‌ಸ್ಟರ್‌ಡ್ಯಾಮ್‌, ನೆದರ್ಲೆಂಡ್ಸ್: ಮೆಂಫಿಸ್ ಡಿಪೇ ಪೆನಾಲ್ಟಿ ಅವಕಾಶದಲ್ಲಿ ಗಳಿಸಿದ ಗೋಲು ಹಾಗೂ ಡೆಂಜೆಲ್‌ ಡುಂಫ್ರೈಸ್‌ ಅವರ ಆಟದ ಬಲದಿಂದ ನೆದರ್ಲೆಂಡ್ಸ್ ತಂಡವು ಯೂರೊ ಕಪ್ ಫುಟ್‌ಬಾಲ್ ಟೂರ್ನಿಯ ಪ್ರೀಕ್ವಾರ್ಟರ್‌ಫೈನಲ್‌ ಪ್ರವೇಶಿಸಿತು. ಗುರುವಾರ ರಾತ್ರಿ ಇಲ್ಲಿ ನಡೆದ ‘ಸಿ‘ ಗುಂಪಿನ ‍ಪಂದ್ಯದಲ್ಲಿ 2–0ಯಿಂದ ಆಸ್ಟ್ರಿಯಾ ತಂಡವನ್ನು ಪರಾಭವಗೊಳಿಸಿತು.

ಪಂದ್ಯದ 11ನೇ ನಿಮಿಷದಲ್ಲಿ ಆಸ್ಟ್ರಿಯಾ ತಂಡದ ಡೇವಿಡ್‌ ಅಲಾಬಾ ಎಸಗಿದ ಪ್ರಮಾದಿಂದಾಗಿ ನೆದರ್ಲೆಂಡ್ಸ್ ತಂಡಕ್ಕೆ ಪೆನಾಲ್ಟಿ ಅವಕಾಶ ದೊರೆಯಿತು. ಈ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡ ಡಿಪೇ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು.

ಪಂದ್ಯದ 67ನೇ ನಿಮಿಷದಲ್ಲಿ ಯಶಸ್ವಿಯಾದ ಡೆಂಜೆಲ್‌ ಡುಂಫ್ರೈಸ್‌ ಆತಿಥೇಯ ತಂಡವು 2–0 ಮುನ್ನಡೆ ಗಳಿಸಲು ಕಾರಣರಾದರು. ತಿರುಗೇಟು ನೀಡುವ ಆಸ್ಟ್ರಿಯಾ ತಂಡದ ಪ್ರಯತ್ನಕ್ಕೆ ಫಲ ಸಿಗಲಿಲ್ಲ.

ಟೂರ್ನಿಯಲ್ಲಿ ನೆದರ್ಲೆಂಡ್ಸ್ ತಂಡಕ್ಕೆ ಇದು ಸತತ ಎರಡನೇ ಜಯ. ಮೊದಲ ಪಂದ್ಯದಲ್ಲಿ 3–2ರಿಂದ ಉಕ್ರೇನ್ ತಂಡವನ್ನು ಸೋಲಿಸಿತ್ತು. ಆ ಪಂದ್ಯದಲ್ಲಿಯೂ ಡುಂಫ್ರೈಸ್‌ ಒಂದು ಗೋಲು ಹೊಡೆದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು