ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಈಗಲ್ಸ್‌ ಎಫ್‌ಸಿಗೆ ಪ್ರಶಸ್ತಿ

Published 6 ಏಪ್ರಿಲ್ 2024, 15:58 IST
Last Updated 6 ಏಪ್ರಿಲ್ 2024, 15:58 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಈಗಲ್ಸ್‌ ಎಫ್‌ಸಿ ತಂಡವು ಬಿಡಿಎಫ್‌ಎ ‘ಎ’ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಯೊಂದಿಗೆ ಮಿರ್ಜಾ ಶೇರ್‌ ಅಲಿ ಬೇಗ್ ರೋಲಿಂಗ್ ಕಪ್ ಅನ್ನು ತನ್ನದಾಗಿಸಿಕೊಂಡಿತು.

ಪರಿಕ್ರಮ ಎಫ್‌ಸಿ ತಂಡವು ರನ್ನರ್ಸ್‌ ಅಪ್‌ ಸ್ಥಾನ ಪಡೆಯಿತು. ಈ ಎರಡೂ ತಂಡಗಳು 2024–25ರ ಬಿಡಿಎಫ್‌ಎ ಸೂಪರ್‌ ಲೀಗ್‌ಗೆ ಅರ್ಹತೆ ಪಡೆದವು.

ಬೆಂಗಳೂರು ಫುಟ್‌ಬಾಲ್‌ ಮೈದಾನದಲ್ಲಿ ಶುಕ್ರವಾರ ನಡೆದ ಲೀಗ್‌ನ ಅಂತಿಮ ಪಂದ್ಯದಲ್ಲಿ ಆರ್‌ಡಬ್ಲ್ಯುಎಫ್‌ ತಂಡವು 5–3ರಿಂದ ಮಣಿಸಿತು.

ಈಗಲ್ಸ್‌ ತಂಡವು ಲೀಗ್‌ನಲ್ಲಿ ಆಡಿರುವ ಒಟ್ಟು 12 ಪಂದ್ಯಗಳಲ್ಲಿ 9ರಲ್ಲಿ ಗೆಲುವು, ಒಂದರಲ್ಲಿ ಡ್ರಾ, ಮತ್ತೆರಡರಲ್ಲಿ ಸೋತು ಒಟ್ಟು 28 ಪಾಯಿಂಟ್ಸ್‌ ಗಳಿಸಿದೆ. ಪರಿಕ್ರಮ ತಂಡವು 9ರಲ್ಲಿ ಜಯ ಸಾಧಿಸಿ, ಮೂರಲ್ಲಿ ಸೋತು 27 ಅಂಕ ಪಡೆದಿದೆ.

ವಿಜಯನಗರ ಎಫ್‌ಸಿಗೆ ಪ್ರಶಸ್ತಿ: ‘ಬಿ’ ಡಿವಿಷನ್ ಲೀಗ್‌ನಲ್ಲಿ ವಿಜಯನಗರ ಎಫ್‌ಸಿ ತಂಡವು ಪ್ರಶಸ್ತಿಯೊಂದಿಗೆ ಬೆಂಗಳೂರು ಬ್ಲೂಸ್ ಕಪ್ ತನ್ನದಾಗಿಸಿಕೊಂಡಿತು. ಸ್ನೈಪರ್ಸ್ ಎಫ್‌ಸಿ ತಂಡವು ರನ್ನರ್ಸ್‌ ಅಪ್‌ ಆಯಿತು. ಈ ಎರಡೂ ತಂಡಗಳು 2024–05ರ ಬಿಡಿಎಫ್‌ಎ ‘ಎ’ ಡಿವಿಷನ್‌ ಲೀಗ್‌ಗೆ ಅರ್ಹತೆ ಪಡೆದವು.

ಶುಕ್ರವಾರ ನಡೆದ ಲೀಗ್‌ನ ಅಂತಿಮ ಪಂದ್ಯದಲ್ಲಿ ಸ್ನೈಪರ್ಸ್‌ ತಂಡವು 2–0 ಯಿಂದ ಮೊಹಮ್ಮದನ್‌ ಸ್ಪೋರ್ಟಿಂಗ್‌ ಎಫ್‌ಸಿ ತಂಡವನ್ನು ಸೋಲಿಸಿತು.

ವಿಜಯನಗರ ತಂಡವು ಲೀಗ್‌ನಲ್ಲಿ ಆಡಿರುವ 12 ಪಂದ್ಯಗಳಲ್ಲಿ 9ರಲ್ಲಿ ಗೆದ್ದು, ಮೂರರಲ್ಲಿ ಡ್ರಾ ಸಾಧಿಸಿ 30 ಅಂಕ ಪಡೆದಿದೆ. ಸ್ನೈಪರ್ಸ್‌ ತಂಡವು 9ರಲ್ಲಿ ಜಯಗಳಿಸಿ, ಎರಡರಲ್ಲಿ ಡ್ರಾ ಸಾಧಿಸಿ, ಮತ್ತೊಂದರಲ್ಲಿ ಸೋತು 29 ಪಾಯಿಂಟ್ಸ್‌ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT