ಭಾನುವಾರ, ಜುಲೈ 3, 2022
27 °C

ಐಎಸ್‌ಎಲ್‌: ಬೆಂಗಾಲ್ ಸೋಲು ತಪ್ಪಿಸಿದ ಸ್ಕಾಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಸ್ಕೊ: ಪಂದ್ಯದ ಕೊನೆಯ ನಿಮಿಷದಲ್ಲಿ ಕಾಲ್ಚಳಕ ತೋರಿದ ಸ್ಕಾಟ್ ನೆವಿಲ್ಲೆ ಈಸ್ಟ್ ಬೆಂಗಾಲ್ ತಂಡಕ್ಕೆ ಆಪತ್ಬಾಂಧವರಾದರು. ತಂಡದ ಸೋಲು ತಪ್ಪಿಸಿದರು.  ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ತಂಡವು ಕೇರಳ ಬ್ಲಾಸ್ಟರ್ಸ್ ತಂಡದೊಂದಿಗೆ 1–1ರ ಡ್ರಾ ಸಾಧಿಸಿತು.

ಪಂದ್ಯದ ಮೊದಲಾರ್ಧದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. 64ನೇ ನಿಮಿಷದಲ್ಲಿ ಅಲ್ಬಿನೊ ಗೋಮ್ಸ್ ಅವರ ನೆರವು ಪಡೆದ ಜೋರ್ಡಾನ್ ಮರೆ ಸೊಗಸಾದ ಗೋಲು ಹೊಡೆದು ಕೇರಳ ಬ್ಲಾಸ್ಟರ್ಸ್‌ಗೆ ಮುನ್ನಡೆ ತಂದುಕೊಟ್ಟರು. ಕೊನೆಯವರೆಗೂ ಮುನ್ನಡೆ ಕಾಯ್ದುಕೊಂಡಿದ್ದ ತಂಡಕ್ಕೆ 90ನೇ ನಿಮಿಷದಲ್ಲಿ ಆಘಾತ ಎದುರಾಯಿತು. ಸ್ಕಾಟ್‌ ಮಾಡಿದ ಮೋಡಿಯು ಕೇರಳ ತಂಡದ ಗೆಲುವನ್ನು ಕಸಿದುಕೊಂಡಿತು.

ಬ್ಯಾಂಬೊಲಿಮ್‌ನ ಜಿಎಂಸಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಮಂಬೈ ಸಿಟಿ ಎಫ್‌ಸಿ– ಹೈದರಾಬಾದ್ ಎಫ್‌ಸಿ ಸೆಣಸಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು