ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್: ದೂರದ ಗೋಲು ಬಾರಿಸಿ ದಾಖಲೆ ಬರೆದ ಟಾಮ್ ಕಿಂಗ್

Last Updated 22 ಜನವರಿ 2021, 3:13 IST
ಅಕ್ಷರ ಗಾತ್ರ

ಲಂಡನ್: ಇಂಗ್ಲೆಂಡ್‌ ಆಟಗಾರ ಟಾಮ್‌ ಕಿಂಗ್‌ ಬಾರಿಸಿದ ಒಂದು ಗೋಲಿನಿಂದಾಗಿ ಚೆಲ್ಟನ್‌ಹ್ಯಾಮ್‌ ಟೌನ್‌ ಕ್ಲಬ್‌ ವಿರುದ್ಧ ಬುಧವಾರ (ಜನವರಿ 19) ನಡೆದ ಪಂದ್ಯವನ್ನು ನ್ಯೂಪೋರ್ಟ್‌ ಕೌಂಟಿ ತಂಡ 1-1 ರಲ್ಲಿ ಡ್ರಾ ಮಾಡಿಕೊಂಡಿತು. ಟಾಮ್‌ ಬಾರಿಸಿದ ಈ ಒಂದು ಗೋಲು ಸ್ಪರ್ಧಾತ್ಮಕ ಫುಟ್‌ಬಾಲ್‌ ಇತಿಹಾಸದಲ್ಲಿ ಅತ್ಯಂತ ದೂರದ ಗೋಲು ಎಂಬ ದಾಖಲೆಗೆ ಪಾತ್ರವಾಗಿದೆ.

ಮೈದಾನದ ಒಂದು ತುದಿಯಿಂದ ಟಾಮ್‌ ಕಿಕ್‌ ಮಾಡಿದ ಚೆಂಡು ಬರೋಬ್ಬರಿ 96.01 ಮೀಟರ್‌ ದೂರ ಗಾಳಿಯಲ್ಲಿ ಹಾರಿ ಎದುರಾಳಿ ತಂಡದ ಗೋಲ್‌ಕೀಪರ್‌ ಜೋಶುವಾ ಗ್ರಿಫ್ಫಿಥ್ಸ್‌ (ಇಂಗ್ಲೆಂಡ್‌) ತಡೆ ಮೀರಿ ಗೋಲು ಪೆಟ್ಟಿಗೆ ಸೇರಿತು. ಈ ಪಂದ್ಯವು ಚೆಲ್ಟನ್‌ಹ್ಯಾಮ್‌ನ ಜಾನಿ–ರಾಕ್ಸ್ ಕ್ರೀಡಾಂಗಣದಲ್ಲಿ ನಡೆಯಿತು.

ಈ ಹಿಂದೆ ಅತಿ ದೂರದ ಗೋಲು ಬಾರಿಸಿದ ದಾಖಲೆ ಬೋಸ್ನಿಯಾದ ಅಸ್ಮಿರ್‌ ಬೆಗೋವಿಕ್‌ ಹೆಸರಲ್ಲಿತ್ತು. ಇಂಗ್ಲೀಷ್‌ ಪ್ರೀಮಿಯರ್‌ ಲೀಗ್‌ನಲ್ಲಿ ಅವರು 91.9 ಮೀಟರ್‌ ಉದ್ದದ ಗೋಲು ಬಾರಿಸಿದ್ದರು. 2013ರ ನವೆಂಬರ್‌ 2ರಂದು ನಡೆದ ಸೌಥಾಂಪ್ಟನ್‌ ವಿರುದ್ಧದ ಪಂದ್ಯದಲ್ಲಿ ಅವರು ಸ್ಟೋಕ್‌ ಸಿಟಿ ತಂಡದ ಪರ ಗೋಲು ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT