ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯುರೋ ಕಪ್ ಫುಟ್‌ಬಾಲ್ ಇಂದಿನಿಂದ: ಆತಿಥೇಯ ಜರ್ಮನಿಗೆ ಸ್ಕಾಟ್ಲೆಂಡ್ ಸವಾಲು

Published 13 ಜೂನ್ 2024, 21:30 IST
Last Updated 13 ಜೂನ್ 2024, 21:30 IST
ಅಕ್ಷರ ಗಾತ್ರ

ಮ್ಯೂನಿಚ್: ಯುರೋಪ್ ಖಂಡದ ದಿಗ್ಗಜರು ಮತ್ತು ಉದಯೋನ್ಮುಖ ಫುಟ್‌ಬಾಲ್ ಆಟಗಾರರ ಕಾಲ್ಚಳಕದ ಹಬ್ಬ ಯುರೋ ಕಪ್ –2024 ಆರಂಭಕ್ಕೆ ವೇದಿಕೆ ಸಿದ್ಧವಾಗಿದೆ. 

ಭಾರತೀಯ ಕಾಲಮಾನದ ಪ್ರಕಾರ; ಶುಕ್ರವಾರ ತಡರಾತ್ರಿ ನಡೆಯಲಿರುವ ಟೂರ್ನಿಯ ಎ ಗುಂಪಿನ ಮೊದಲ ಪಂದ್ಯದಲ್ಲಿ ಆತಿಥೇಯ ಜರ್ಮನಿ ಮತ್ತು ಸ್ಕಾಟ್ಲೆಂಡ್ ಮುಖಾಮುಖಿಯಾಗಲಿವೆ.

2014ರ ವಿಶ್ವಕಪ್ ಜಯಿಸಿದ್ದ ಜರ್ಮನಿ ತಂಡಕ್ಕೆ ನಾಯಕರಾಗಿದ್ದ  ಫಿಲಿಪ್ ಲಾಮ್ ಈಗ ಯುರೋ 2024 ಟೂರ್ನಿಯ  ನಿರ್ದೇಶಕರಾಗಿದ್ದಾರೆ. 

ಎ ಗುಂಪಿನ ಇನ್ನೊಂದು ಪಂದ್ಯದಲ್ಲಿ ಹಂಗರಿ ಹಾಗೂ ಸ್ವಿಟ್ಜರ್‌ಲೆಂಡ್ ಹಣಾಹಣಿ ನಡೆಸಲಿವೆ. 

ಇದೇ ದಿನ ನಡೆಯುವ ಬಿ ಗುಂಪಿನ ಪಂದ್ಯದಲ್ಲಿ ಸ್ಪೇನ್ ಮತ್ತು ಕ್ರೊವೇಷ್ಯಾ ಮುಖಾಮುಖಿಯಾಗಲಿವೆ. 

ಐದು ಗುಂಪುಗಳು: ಈ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಪೈಪೋಟಿ ನಡೆಸಲಿವೆ. ಐದು ಗುಂಪುಗಳಲ್ಲಿ ತಂಡಗಳನ್ನು ವಿಂಗಡಿಸಲಾಗಿದೆ. 

ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ, ಫ್ರಾನ್ಸ್‌ನ ಕೀಲಿಯನ್ ಎಂಬಾಪೆ ಅವರು ಪ್ರಮುಖ ಆಕರ್ಷಣೆಯಾಗಿದ್ದಾರೆ. 

ಪಂದ್ಯ ಆರಂಭ: ರಾತ್ರಿ 12.30

ನೇರಪ್ರಸಾರ : ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT