ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್ ಫುಟ್‌ಬಾಲ್ ತಂಡದ ಮಾಜಿ ಮ್ಯಾನೇಜರ್ ಗೊರಾನ್ ಎರಿಕ್‌ಸನ್‌ಗೆ ಕ್ಯಾನ್ಸರ್

Published 11 ಜನವರಿ 2024, 20:51 IST
Last Updated 11 ಜನವರಿ 2024, 20:51 IST
ಅಕ್ಷರ ಗಾತ್ರ

ಸ್ಟಾಕ್‌ಹೋಮ್: ಇಂಗ್ಲೆಂಡ್ ಫುಟ್‌ಬಾಲ್ ತಂಡದ ಮಾಜಿ ಮ್ಯಾನೇಜರ್ ಸ್ವೇನ್ ಗೊರಾನ್ ಎರಿಕ್‌ಸನ್ ಅವರಿಗೆ ಮೆದೋಜೀರಕ ಗ್ರಂಥಿಯ ಕ್ಯಾನ್ಸರ್‌ ಇರುವುದು ಪತ್ತೆಯಾಗಿದೆ. ಅವರು ಇನ್ನು ‘ಒಂದು ವರ್ಷ‘ ಮಾತ್ರ ಬದುಕಲು ಸಾಧ್ಯ ಎಂದು ವೈದ್ಯರು ತಿಳಿಸಿದ್ದಾರೆ.

ಎರಿಕ್‌ಸನ್ ಅವರಿಗೆ 75 ವರ್ಷವಾಗಿದೆ. ಅವರು ಪ್ರತಿಷ್ಠಿತ ತಂಡಗಳಿಗೆ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದಾರೆ. 2002 ಮತ್ತು 2006ರಲ್ಲಿ ಇಂಗ್ಲೆಂಡ್ ತಂಡವು ಫಿಫಾ ವಿಶ್ವಕಪ್ ಕ್ವಾರ್ಟರ್‌ಫೈನಲ್ ತಲುಪಿದ್ದ ಇಂಗ್ಲೆಂಡ್ ತಂಡಕ್ಕೆ ಅವರು ಮ್ಯಾನೇಜರ್ ಆಗಿದ್ದರು.

‘ವೈದ್ಯರು ಹೇಳಿರುವ ಪ್ರಕಾರ ಅತಿ ಹೆಚ್ಚು ಎಂದರೆ ಒಂದು ವರ್ಷ ಬದುಕಬಹುದು. ಅದಕ್ಕಿಂತಲೂ ಕಡಿಮೆಯೂ ಆಗಬಹುದು. ಆದರೆ ನಾನು ಹೋರಾಡ ಮಾಡುತ್ತೇನೆ’ ಎಂದು ಪಬ್ಲಿಕ್ ಬ್ರಾಡ್‌ಕಾಸ್ಟರ್ ಎಸ್‌ವೆರಿಗೆಸ್ ರೇಡಿಯೋ ಸಂದರ್ಶನದಲ್ಲಿ ಎರಿಕ್‌ಸನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT