ಶನಿವಾರ, ಫೆಬ್ರವರಿ 27, 2021
30 °C

ಫುಟ್‌ಬಾಲ್‌: ಎಫ್‌ಸಿ ಡೆಕ್ಕನ್‌ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಜೀಶ್‌ ಇ. (10ನೇ ಹಾಗೂ 70ನೇ ನಿಮಿಷ) ಗಳಿಸಿದ ಅವಳಿ ಗೋಲುಗಳ ನೆರವಿನಿಂದ ಎಫ್‌ಸಿ ಡೆಕ್ಕನ್ ತಂಡವು ಬಿಡಿಎಫ್‌ಎ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಪಂದ್ಯದಲ್ಲಿ ಸೋಮವಾರ ಯಂಗ್ ಚಾಲೆಂಜರ್ಸ್‌ ಎಫ್‌ಸಿ ತಂಡವನ್ನು 6–2ರಿಂದ ಸೋಲಿಸಿತು.

ವಿಜೇತ ತಂಡದ ಪರ ಸೂರ್ಯ ವಿ.ಕೆ. (26ನೇ ನಿ.), ಕವಿಯರಸನ್‌ (47ನೇ ನಿ.), ಸ್ಟಾಲಿನ್‌ ಡೇನಿಯಲ್‌ (82ನೇ ನಿ.) ಹಾಗೂ ಡಿ.ಎಂ.ಅಂಥೋನಿ (90ನೇ ನಿಮಿಷ) ಗೋಲು ದಾಖಲಿಸಿದರು. ಯಂಗ್ ಚಾಲೆಂಜರ್ಸ್ ತಂಡದ ದೀಪನ್ ಪ್ರಕಾಶ್ (50ನೇ ನಿ.) ಹಾಗೂ ಅಂಥೊನಿ ಪಿ.(50ನೇ ನಿ.) ಕಾಲ್ಚಳಕ ತೋರಿದರು.

ಮತ್ತೊಂದು ಪಂದ್ಯದಲ್ಲಿ ಸ್ಟೂಡೆಂಟ್ಸ್ ಯೂನಿಯನ್ ಎಫ್‌ಸಿ ತಂಡವು 1–0ಯಿಂದ ಕಿಕ್‌ಸ್ಟಾರ್ಟ್‌ ಎಫ್‌ಸಿಯನ್ನು ಮಣಿಸಿತು. ಸ್ಟೂಡೆಂಟ್ಸ್ ಯೂನಿಯನ್ ಪರ ಲೋಕೇಶ್‌ (28ನೇ ನಿ.) ಗೋಲು ಹೊಡೆದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು