ಗೋವಾ: ಪಾಯಿಂಟ್ ಪಟ್ಟಿಯ ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿದ್ದ ಮುಂಬೈ ಸಿಟಿ ಎಫ್ಸಿ ತಂಡಕ್ಕೆ ಎಫ್ಸಿ ಗೋವಾ ತಂಡದವರು ನಿರಾಸೆ ಮೂಡಿಸಿದರು.

ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಇಂಡಿಯನ್ ಸೂಪರ್ ಲೀಗ್ನ (ಐಎಸ್ಎಲ್) ಪಂದ್ಯದಲ್ಲಿ ಗೋವಾ ತಂಡ ಮುಂಬೈ ವಿರುದ್ಧ 2-0ಯಿಂದ ಗೆದ್ದಿತು. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ತಂಡವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿತು.

ಆಕ್ರಮಣಕಾರಿ ಆಟ ಮತ್ತು ಗೋಲು ಗಳಿಕೆಗೆ ಹೆಸರು ಗಳಿಸಿರುವ ಗೋವಾ ತಂಡ ಆರಂಭದಲ್ಲೇ ಮುಂಬೈ ತಂಡವನ್ನು ಕಂಗೆಡಿಸಿತು. ಮುಂಬೈ ಸಿಟಿಯ ರಕ್ಷಣಾ ವಿಭಾಗಕ್ಕೆ ನಿರಂತರ ಚಳ್ಳೆಹಣ್ಣು ತಿನ್ನಿಸುವಲ್ಲಿ ಗೋವಾ ಆಟಗಾರರು ಯಶಸ್ವಿಯಾದರು.

28ನೇ ನಿಮಿಷದಲ್ಲಿ ಎಡು ಬೇಡಿಯಾ ಗಳಿಸಿದ ಗೋಲಿನ ಮೂಲಕ ಮುನ್ನಡೆ ಸಾಧಿಸಿದ ಗೋವಾಗೆ 79ನೇ ನಿಮಿಷದಲ್ಲಿ ಫೆರಾನ್ ಕೊರೊಮಿನಾಸ್ ಮತ್ತೊಂದು ಗೋಲು ಗಳಿಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.