ಬೆಂಗಳೂರು: ಎಫ್ಸಿ ಗೋವಾ ತಂಡವು ಡೆರಿಕ್ ಪೆರೇರಾ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಿ ಕೊಂಡಿದೆ. ಈ ಬಾರಿ ನಿರೀಕ್ಷಿತ ಫಲಿತಾಂಶ ಕಾಣದ ಕಾರಣ ಕೋಚ್ ಯುವಾನ್ ಫೆರಾಂಡೊ ಅವರನ್ನು ಗೋವಾ ಕಳೆದ ವಾರ ವಜಾ ಮಾಡಿತ್ತು. ಅವರು ಎಡಿಕೆ ಮೋಹನ್ ಬಾಗನ್ ತಂಡವನ್ನು ಸೇರಿಕೊಂಡಿದ್ದಾರೆ.

ಪೆರೇರಾ ಅವರನ್ನು ನೇಮಕ ಮಾಡಿರುವ ವಿಷಯವನ್ನು ಗುರುವಾರ ತಂಡ ತಿಳಿಸಿದೆ. ಐಎಸ್ಎಲ್ನಲ್ಲಿ ಖಾಯಂ ಆಗಿ ಕಾರ್ಯನಿರ್ವಹಿಸುವ ಭಾರತದ ಎರಡನೇ ಕೋಚ್ ಆಗಿದ್ದಾರೆ ಪೆರೇರಾ. ನಾರ್ತ್ ಈಸ್ಟ್ ಯುನೈಟೆಡ್ ತಂಡ ಖಲಿದ್ ಜಮೀಲ್ ಅವರನ್ನು ನೇಮಕ ಮಾಡುವ ಮೂಲಕ ಭಾರತದವರನ್ನು ಈ ಹುದ್ದಗೇರಿಸಿದ ಮೊದಲ ತಂಡ ಎನಿಸಿಕೊಂಡಿತ್ತು.

2017ರಿಂದ ಸಹಾಯಕ ಕೋಚ್ ಆಗಿ ಗೋವಾ ತಂಡದೊಂದಿಗೆ ಇದ್ದ ಪೆರೇರಾ ನಂತರ ತಾಂತ್ರಿಕ ನಿರ್ದೇಶಕ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.