ಬುಧವಾರ, ಜೂನ್ 23, 2021
25 °C
ಎಎಫ್‌ಸಿ ಚಾಂಪಿಯನ್ಸ್ ಲೀಗ್‌ ಫುಟ್‌ಬಾಲ್ ಟೂರ್ನಿ

ಎಎಫ್‌ಸಿ ಚಾಂಪಿಯನ್ಸ್ ಲೀಗ್: ಎಫ್‌ಸಿ ಗೋವಾಕ್ಕೆ ಮೊದಲ ಜಯದ ನಿರೀಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮಡಗಾಂವ್‌: ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಎಫ್‌ಸಿ ಗೋವಾ ತಂಡವು ಎಎಫ್‌ಸಿ ಚಾಂಪಿಯನ್ಸ್ ಲೀಗ್ (ಎಸಿಎಲ್) ಟೂರ್ನಿಯಲ್ಲಿ ಮೊದಲ ಜಯದ ನಿರೀಕ್ಷೆಯಲ್ಲಿದೆ. ಸೋಮವಾರ ಇಲ್ಲಿ ನಡೆಯುವ ಕತಾರ್‌ನ ಅಲ್ ರಯಾನ್ ತಂಡದ ಎದುರಿನ ಪಂದ್ಯವನ್ನು ಆತಿಥೇಯ ತಂಡಕ್ಕೆ ಲೀಗ್‌ನ ನಾಕೌಟ್‌ ಪ್ರವೇಶದ ಅವಕಾಶ ಇದೆ.

‘ಇ‘ ಗುಂಪಿನ ಪಂದ್ಯದಲ್ಲಿ ಈ ಮೊದಲು ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯ ಗೋಲುರಹಿತ ಡ್ರಾ ಕಂಡರೂ ಪಂದ್ಯದುದ್ದಕ್ಕೂ ಕತಾರ್‌ನ ತಂಡ ಪಾರಮ್ಯ ಮೆರೆದಿತ್ತು. 

ಆಡಿದ ನಾಲ್ಕು ಪಂದ್ಯಗಳಿಂದ ಮೂರರಲ್ಲಿ ಸೋತು ಕೇವಲ ಒಂದು ಪಾಯಿಂಟ್ಸ್ ಕಲೆಹಾಕಿರುವ ಅಲ್‌ ರಯಾನ್‌ಗೆ 16ರ ಘಟ್ಟ ಪ್ರವೇಶಿಸುವ ಅವಕಾಶ ಇಲ್ಲ. ಆದರೆ ಇಷ್ಟೇ ಪಂದ್ಯಗಳಿಂದ ಎರಡು ಪಾಯಿಂಟ್ಸ್ ಗಳಿಸಿರುವ ಗೋವಾಕ್ಕೆ ಈ ಅವಕಾಶ ಇದೆ.

ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಟೂರ್ನಿಯ 2019–20ರ ಆವೃತ್ತಿಯಲ್ಲಿ ಲೀಗ್ ವಿಜೇತ ತಂಡವಾಗಿರುವ ಗೋವಾ, ಎಸಿಎಲ್‌ನಲ್ಲಿ ಮೊದಲ ಜಯಕ್ಕೆ ಹಂಬಲಿಸುತ್ತಿದೆ. ಟೂರ್ನಿಯಲ್ಲಿ ಎರಡು ಪಂದ್ಯಗಳನ್ನು ಗೋಲುರಹಿತ ಡ್ರಾ ಮಾಡಿಕೊಂಡಿದೆ.

ಇರಾನ್‌ನ ಪರ್ಸೆಪೊಲಿಸ್‌ ತಂಡದ ವಿರುದ್ಧ ಆಡಿದ ಇನ್ನೆರಡು ಪಂದ್ಯಗಳಲ್ಲಿ, ಗೋವಾ ಕ್ರಮವಾಗಿ 1–2 ಹಾಗೂ 0–4ರಿಂದ ನಿರಾಸೆ ಅನುಭವಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು