ಗುರುವಾರ , ಜೂನ್ 24, 2021
29 °C

ಫುಟ್‌ಬಾಲ್‌: ಭಾರತ 19 ವರ್ಷದೊಳಗಿನವರ ತಂಡಕ್ಕೆ ಶ್ರೇಯಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡದ ಮಿಡ್‌ಫೀಲ್ಡರ್‌ ಶ್ರೇಯಸ್ ಕೇತ್ಕರ್ ಅವರು ಭಾರತ 19 ವರ್ಷದೊಳಗಿನವರ ಫುಟ್‌ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ತರಬೇತಿಗಳು ಪುನರಾರಂಭವಾದ ಬಳಿಕ ಅವರು ತಂಡದೊಂದಿಗೆ ಅಭ್ಯಾಸ ನಡೆಸಲಿದ್ದಾರೆ.

‘ಭಾರತ 19 ವರ್ಷದೊಳಗಿನವರ ತಂಡದೊಂದಿಗೆ ತರಬೇತಿ ಪಡೆಯಲು ಆಯ್ಕೆಯಾಗಿದ್ದು ಖುಷಿ ನೀಡಿದೆ. ಭವಿಷ್ಯದಲ್ಲಿ ರಾಷ್ಟ್ರೀಯ ಸೀನಿಯರ್‌ ತಂಡಕ್ಕೂ ಆಡುವ ವಿಶ್ವಾಸವಿದೆ‘ ಎಂದು ಶ್ರೇಯಸ್ ಹೇಳಿದ್ದಾರೆ.

‘2022ರ 19 ವರ್ಷದೊಳಗಿನವರ ಎಎಫ್‌ಸಿ ಕಪ್‌ ಟೂರ್ನಿಗೆ ಭಾರತ ತಂಡಕ್ಕೆ ಆಯ್ಕೆಯಾಗುವುದು ನನ್ನ ಮೊದಲ ಗುರಿ‘ ಎಂದೂ ಶ್ರೇಯಸ್ ನುಡಿದರು.

ಶ್ರೇಯಸ್ ಅವರು ಎಫ್‌ಸಿಬಿಯು ತಂಡದ ಮುಖ್ಯ ಕೋಚ್‌ ರಿಚರ್ಡ್‌ ಹುಡ್‌ ಹಾಗೂ ಸಹಾಯಕ ಕೋಚ್ ಗೌರ್‌ಮಾಂಗಿ ಸಿಂಗ್ ಅವರ ಬಳಿ ಆಟದ ಕೌಶಲಗಳನ್ನು ಕಲಿತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು