ಶುಕ್ರವಾರ, ಆಗಸ್ಟ್ 19, 2022
25 °C

ಫಿಕ್ಸಿಂಗ್‌ ತಡೆ: ‘ರೆಡ್‌ಬಟನ್' ಆ್ಯಪ್‌ಗೆ ಫಿಫಾ ಅನುಮೋದನೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಹೂಫ್‌ಡಾರ್ಪ್‌ (ನೆದರ್ಲೆಂಡ್ಸ್‌): ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಳ್ಳಲು ಬುಕಿಗಳು ಸಂಪರ್ಕಿಸಿದ್ದರೆ ಅದರ ವಿವರಗಳನ್ನು ಹಂಚಿಕೊಳ್ಳಲು ಅಂತರರಾಷ್ಟ್ರೀಯ ಫುಟ್‌ಬಾಲ್‌ ಆಟಗಾರರ ಸಂಸ್ಥೆಯು ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕೆ ಅಂತರರಾಷ್ಟ್ರೀಯ ಫುಟ್‌ಬಾಲ್ ಫೆಡರೇಷನ್‌ (ಫಿಫಾ) ಅನುಮೋದನೆ ನೀಡಿದೆ.

‘ರೆಡ್‌ಬಟನ್‌ ಹೆಸರಿನ ಈ ಸ್ಮಾರ್ಟ್‌ಫೋನ್‌ ಆ್ಯ‍ಪ್‌, ಫಿಕ್ಸಿಂಗ್‌ ಕುರಿತು ಮಾಹಿತಿ ನೀಡಿದ ಆಟಗಾರನ ರಕ್ಷಣೆಗಾಗಿ ಗೌಪ್ಯತೆ ಕಾಪಾಡುವ ಖಚಿತತೆ ನೀಡುತ್ತದೆ‘ ಎಂದು ಅಂತರರಾಷ್ಟ್ರೀಯ ಫುಟ್‌ಬಾಲ್‌ ಆಟಗಾರರ ಸಂಸ್ಥೆ (ಫಿಫ್‌ಪ್ರೊ) ಹೇಳಿದೆ.

‘ಮ್ಯಾಚ್‌ ಫಿಕ್ಸಿಂಗ್‌ಗಾಗಿ ಬುಕಿಗಳು ಸಂಪರ್ಕಿಸಿದ್ದನ್ನು ವರದಿ ಮಾಡಲು ವಿಫಲವಾದರೆ ಆಟಗಾರರು ಶಿಸ್ತುಕ್ರಮ ಎದುರಿಸಬೇಕಾಗುತ್ತದೆ. ಹೀಗಾಗಿ ಅಂಥವರು ತಮ್ಮ ಕುಟುಂಬ ಹಾಗೂ ವೃತ್ತಿಜೀವನ ಅಪಾಯಕ್ಕೆ ಸಿಲುಕಲಿದೆ ಎಂಬ ಭಯವಿಲ್ಲದೆ ವರದಿ ಮಾಡಿಕೊಳ್ಳಲು ಒಂದು ಮಾರ್ಗವಿರಬೇಕು. ಅಂತಹ ಸೌಲಭ್ಯವನ್ನು ರೆಡ್‌ಬಟನ್‌ ಆ್ಯಪ್‌ ನೀಡುತ್ತದೆ‘ ಎಂದು ಫಿಫ್‌ಪ್ರೊ ಕಾನೂನು ವಿಭಾಗದ ನಿರ್ದೇಶಕ ರಾಯ್‌ ವರ್ಮೀರ್‌ ಹೇಳಿದ್ದಾರೆ.

‘ಆಟಗಾರರು ಶಿಸ್ತು ಕ್ರಮ ಎದುರಿಸಬೇಕಾದ ಸಂಭವನೀಯ ಅಪಾಯವನ್ನು ಈ ಆ್ಯಪ್‌ ತಪ್ಪಿಸಲಿದೆ‘ ಎಂದು ವರ್ಮೀರ್‌ ವಿವರಿಸಿದರು.

‘ರೆಡ್‌ಬಟನ್‌ ಆ್ಯಪ್‌ ಮೂಲಕ ಸಲ್ಲಿಸಿದ ಗೌಪ್ಯ ಮಾಹಿತಿಯ ಅನುಸಾರ ಫಿಫಾ ತನಿಖೆ ಮಾಡುತ್ತದೆ‘ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು