ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ.20ರಿಂದ ಫಿಫಾ ವಿಶ್ವಕಪ್

Last Updated 12 ಆಗಸ್ಟ್ 2022, 16:26 IST
ಅಕ್ಷರ ಗಾತ್ರ

ಜೂರಿಚ್: ದೋಹಾದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಟೂರ್ನಿಯ ಆರಂಭವನ್ನು ಒಂದು ದಿನ ಮುಂದೂಡಲಾಗಿದೆ.

ಇದರಿಂದಾಗಿ ಟೂರ್ನಿಯು ನವೆಂಬರ್ 20ರಂದು ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಕತಾರ್ ಹಾಗೂ ಇಕ್ವೆಡಾರ್ ತಂಡಗಳು ಮುಖಾಮುಖಿಯಾಗಲಿವೆ. ಫಿಫಾ ಈ ನಿರ್ಧಾರವನ್ನು ಗುರುವಾರ ಕೈಗೊಂಡಿತು. ಕತಾರ್‌ ದೇಶದವರಿಗಾಗಿ ಭಾನುವಾರದ ಸಂಜೆಯೊಂದನ್ನು ಮೀಸಲಿಡಲು ಈ ತೀರ್ಮಾನ ಮಾಡಲಾಗಿದೆ.

ಏಳು ವರ್ಷಗಳ ಹಿಂದೆ ಟೂರ್ನಿಯ ಆಯೋಜನೆಯನ್ನು ಮಂಜೂರು ಮಾಡಿದಾಗ ಜೂನ್‌–ಜುಲೈನಲ್ಲಿ ಟೂರ್ನಿ ನಡೆಸುವ ವೇಳಾಪಟ್ಟಿ ಇತ್ತು. ಆದರೆ, ಈ ಎರಡೂ ತಿಂಗಳುಗಲ್ಲಿ ಕತಾರ್‌ನಲ್ಲಿ ಬೇಸಿಗೆ ಬೇಗೆ ತಾರಕಕ್ಕೇರಿರುತ್ತದೆ. ಆದ್ದರಿಂದ ನವೆಂಬರ್‌ –ಡಿಸೆಂಬರ್‌ಗೆ ಮುಂದೂಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT