FIFA World Cup: ಗೋಲು ಗಳಿಕೆಯಲ್ಲಿ ದಾಖಲೆ

ಲುಸೈಲ್, ದೋಹಾ: ಅರ್ಜೆಂಟೀನಾ ಮತ್ತು ಫ್ರಾನ್ಸ್ ತಂಡಗಳ ನಡುವಣ ಫೈನಲ್ ಪಂದ್ಯದಲ್ಲಿ ಆರು ಗೋಲುಗಳು ದಾಖಲಾಗುವುದರೊಂದಿಗೆ ಈ ವಿಶ್ವಕಪ್ ಟೂರ್ನಿಯು ಅತಿ ಹೆಚ್ಚು ಅಂದರೆ 172 ಗೋಲುಗಳ ದಾಖಲೆ ಬರೆಯಿತು.
32 ತಂಡಗಳ 64 ಪಂದ್ಯಗಳ ಮಾದರಿಯ ಆವೃತ್ತಿಯು ಮೊದಲ ಬಾರಿ ಆರಂಭವಾಗಿದ್ದು 1998ರಲ್ಲಿ. ಆ ವರ್ಷ ಮತ್ತು 2014ರ ಆವೃತ್ತಿಗಳಲ್ಲಿ 171 ಗೋಲುಗಳು ಗಳಿಕೆಯಾಗಿದ್ದು, ಇದುವರೆಗಿನ ದಾಖಲೆಯಾಗಿತ್ತು.
ಮುಂಬರುವ 2026ರ ಟೂರ್ನಿಯಲ್ಲಿ 48 ತಂಡಗಳು ಆಡುವುದರಿಂದ ಈಗಿನ ದಾಖಲೆ ಅಳಿಸಿಹೋಗಬಹುದು. 2018ರಲ್ಲಿ ರಷ್ಯಾದಲ್ಲಿ ನಡೆದ ಟೂರ್ನಿಯಲ್ಲಿ ಫ್ರಾನ್ಸ್ ಮತ್ತು ಕ್ರೊವೇಷ್ಯಾ ನಡುವಣ ಫೈನಲ್ ಪಂದ್ಯದಲ್ಲೂ ಆರು ಗೋಲುಗಳು ದಾಖಲಾಗಿದ್ದವು. ಫ್ರಾನ್ಸ್ 4–2ರಿಂದ ಗೆದ್ದಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.