ಭಾನುವಾರ, ಸೆಪ್ಟೆಂಬರ್ 19, 2021
27 °C

ಫುಟ್‌ಬಾಲ್‌: ಭಾರತ–ನೇಪಾಳ ಪಂದ್ಯ ಡ್ರಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕಠ್ಮಂಡು: ಭಾರತ ತಂಡವು ಗುರುವಾರ ಇಲ್ಲಿ ನಡೆದ ನೇಪಾಳ ವಿರುದ್ಧದ ಸ್ನೇಹಪರ ಫುಟ್‌ಬಾಲ್ ಪಂದ್ಯವನ್ನು 1–1ರಿಂದ ಡ್ರಾ ಮಾಡಿಕೊಂಡಿತು.

ಸ್ಯಾಫ್‌ ಚಾಂಪಿಯನ್‌ಷಿಪ್‌ಗೆ ಪೂರ್ವಸಿದ್ಧತೆಯಾಗಿ ನಡೆದ ಪಂದ್ಯದಲ್ಲಿ ಆತಿಥೇಯ ತಂಡದ ಪರ ಅಂಜನ್ ಬಿಸ್ತಾ 36ನೇ ನಿಮಿಷದಲ್ಲಿ ಗೋಲು ದಾಖಲಿಸಿ ಮುನ್ನಡೆ ತಂದುಕೊಟ್ಟಿದ್ದರು. ಬಳಿಕ ಭಾರತದ ಅನಿರುದ್ಧ ಥಾಪಾ ಕಾಲ್ಚಳಕ ತೋರಿ ಪಂದ್ಯವನ್ನು ಸಮಬಲಗೊಳ್ಳುವಂತೆ ಮಾಡಿದರು.

ಉಭಯ ತಂಡಗಳ ನಡುವಣ ಎರಡನೇ ಪಂದ್ಯವು ಭಾನುವಾರ ನಡೆಯಲಿದೆ.

ಸ್ಯಾಫ್‌ ಚಾಂಪಿಯನ್‌ಷಿಪ್‌ ಅಕ್ಟೋಬರ್ 3ರಿಂದ 13ರವರೆಗೆ ಮಾಲ್ಡಿವ್ಸ್‌ನಲ್ಲಿ ನಿಗದಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು