ಬೆಂಗಳೂರು: ಎರಡು ಗೋಲು ಗಳಿಸಿದ ಸಂಧ್ಯಾ, ಹಾಲಿ ಚಾಂಪಿಯನ್ ಸೇತು ಎಫ್‌ಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ರಾಷ್ಟ್ರೀಯ ಮಹಿಳಾ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಭಾನುವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಆ ತಂಡ ಕಿಕ್‌ಸ್ಟಾರ್ಟ್ ಎಫ್‌ಸಿ ಕರ್ನಾಟಕ ಎದುರು 3–0ಯಿಂದ ಗೆದ್ದಿತು.

ಇಲ್ಲಿನ ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಸಂಧ್ಯಾ 12ನೇ ನಿಮಿಷದಲ್ಲಿಯೇ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ತಂದರು. ಅಮ್ಸವಲಿ ನೀಡಿದ ಪಾಸ್‌ನಲ್ಲಿ ಚೆಂಡನ್ನು ಗುರಿ ಸೇರಿಸುವಲ್ಲಿ ಅವರು ತಪ್ಪು ಮಾಡಲಿಲ್ಲ. 39ನೇ ನಿಮಿಷದಲ್ಲಿ ಕೆ. ಸುಮಿತ್ರಾ ಗಳಿಸಿದ ಗೋಲಿನಿಂದ ಸೇತು ಎಫ್‌ಸಿಯ ಮುನ್ನಡೆ 2–0ಗೆ ಹಿಗ್ಗಿತು.

ಪಂದ್ಯದ ಕೊನೆಯ ಹಂತದಲ್ಲಿ (90ನೇ ನಿಮಿಷ) ಮತ್ತೊಮ್ಮೆ ಕಾಲ್ಚಳಕ ತೋರಿದ ಸಂಧ್ಯಾ ತಮ್ಮ ತಂಡದ ಗೆಲುವನ್ನು ಖಚಿತಪಡಿಸಿದರು.

ಮತ್ತೊಂದು ಪಂದ್ಯದಲ್ಲಿ ಕ್ರಿಪ್‌ಶಾ ಎಫ್‌ಸಿ ತಂಡವು ಪಂಜಾಬ್‌ನ ಬಿಬಿಕೆ ಡಿಎವಿ ಎಫ್‌ಸಿ ಎದುರು 4–0ಯಿಂದ ಜಯ ಸಾಧಿಸಿತು.

ವಿಜೇತ ತಂಡದ ಪರ ನಾಯಕಿ ನೊಂಗುಜೈದೆಮ್ ರತನ್ ಬಾಲಾದೇವಿ ಎರಡು ಗೋಲು (61, 85ನೇ ನಿಮಿಷ) ಹೊಡೆದರು. 18ನೇ ನಿಮಿಷದಲ್ಲಿ ಅಂಜು ತಮಂಗ್ ಯಶಸ್ಸು ಕಂಡರೆ, ಮತ್ತೊಂದು ಗೋಲನ್ನು ಸ್ವೀಟಿ ದೇವಿ (95+5) ದಾಖಲಿಸಿದರು.

ಇಂದಿನ ಪಂದ್ಯಗಳು

ಎಫ್‌ಸಿ ಕೊಲ್ಹಾಪುರ–ಬರೋಡಾ ಎಫ್‌ಎ

ಆರಂಭ: ಮಧ್ಯಾಹ್ನ 12 ಗಂಟೆ

ಶ್ರೀಭೂಮಿ ಎಫ್‌ಸಿ–ಕೆಂಕ್ರೆ ಎಫ್‌ಸಿ

ಆರಂಭ: ಮಧ್ಯಾಹ್ನ 3 ಗಂಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.