ಬುಧವಾರ, ಡಿಸೆಂಬರ್ 8, 2021
28 °C

ಫ್ರಾನ್ಸ್ ಫುಟ್‌ಬಾಲ್‌ ಆಟಗಾರ ಕಿಲಿಯನ್‌ ಬಾಪೆಗೆ ಕೋವಿಡ್‌–19

ಎಪಿ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್‌: ಫ್ರಾನ್ಸ್‌ ರಾಷ್ಟ್ರೀಯ ತಂಡ ಹಾಗೂ ಪ್ಯಾರಿಸ್‌ ಸೇಂಟ್‌ ಜರ್ಮನ್‌ ಫುಟ್‌ಬಾಲ್ ಕ್ಲಬ್‌ ಆಟಗಾರ ಕಿಲಿಯನ್‌ ಬಾಪೆ ಅವರಲ್ಲಿ ಕೋವಿಡ್–19 ಸೋಂಕು ಇರುವುದು ದೃಢಪಟ್ಟಿದೆ. ಇದರಿಂದ ನೇಷನ್ಸ್‌‌ ಲೀಗ್‌ನ ಕ್ರೊವೇಷ್ಯಾ ವಿರುದ್ಧದ ಪಂದ್ಯದಲ್ಲಿ ಅವರು ಕಣಕ್ಕಿಳಿಯುವುದಿಲ್ಲ ಎಂದು ಫ್ರೆಂಚ್‌ ಫೆಡರೇಷನ್‌ ತಿಳಿಸಿದೆ.

ಯೂರೋಪಿಯನ್‌ ಫುಟ್‌ಬಾಲ್‌ ಸಂಸ್ಥೆಗಳ ಒಕ್ಕೂಟ (ಯುಇಎಫ್‌ಎ) ನಡೆಸಿದ ಪರೀಕ್ಷೆಯಲ್ಲಿ ಬಾಪೆ ಅವರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಬಳಿಕ ಅವರು  ಫ್ರಾನ್ಸ್‌ ತಂಡದ ತರಬೇತಿ ಶಿಬಿರವನ್ನು ತೊರೆದರು. ಸೋಮವಾರ ಸಂಜೆ ಪ್ರತ್ಯೇಕವಾಸಕ್ಕಾಗಿ ಮನೆಗೆ ಮರಳಿದರು.

ನೇಷನ್ಸ್‌ ಲೀಗ್‌ನಲ್ಲಿ ಶನಿವಾರ ಸ್ವೀಡನ್‌ ಎದುರು ನಡೆದ ಪಂದ್ಯದಲ್ಲಿ ಬಾಪೆ ಬಾರಿಸಿದ ಏಕೈಕ ಗೋಲಿನಿಂದ ಫ್ರಾನ್ಸ್ ತಂಡ 1–0ಯಿಂದ ಸ್ವೀಡನ್‌ಅನ್ನು ಮಣಿಸಿತ್ತು. ಇದು ಅವರ 14ನೇ ಅಂತರರಾಷ್ಟ್ರೀಯ ಗೋಲು ಆಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು