ಮಂಗಳವಾರ, ಆಗಸ್ಟ್ 3, 2021
27 °C
ಜರ್ಮನಿಯ ಫುಟ್‌ಬಾಲ್‌ ಕ್ಲಬ್‌ ಯೂನಿಯನ್‌ ನಿರ್ಧಾರ

ಫುಟ್‌ಬಾಲ್‌ಗೆ ಪ್ರೇಕ್ಷಕರನ್ನು ಕರೆತರಲು ಸಾಮೂಹಿಕ ಕೊರೊನಾ ಸೋಂಕು ಪರೀಕ್ಷೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಬರ್ಲಿನ್‌: ಕ್ರೀಡಾಂಗಣಗಳನ್ನು ಪ್ರೇಕ್ಷಕರಿಂದ ಭರ್ತಿಗೊಳಿಸುವ ಉದ್ದೇಶದಿಂದ ಸಾಮೂಹಿಕ ಕೊರೊನಾ ಸೋಂಕು ತಪಾಸಣೆ ನಡೆಸಲು ಜರ್ಮನಿಯ ಫುಟ್‌ಬಾಲ್‌ ಕ್ಲಬ್‌ ಯೂನಿಯನ್‌ ನಿರ್ಧರಿಸಿದೆ. ಸೆಪ್ಟೆಂಬರ್‌ನಲ್ಲಿ ಭಾರಿ ಪ್ರೇಕ್ಷಕರ ಸಮ್ಮುಖದಲ್ಲಿ ಪಂದ್ಯಗಳನ್ನು ಆಯೋಜಿಸಿಸಲು ಅದು ಚಿಂತನೆ ನಡೆಸಿದೆ.

22,012 ಆಸನ ಸಾಮರ್ಥ್ಯದ ಕ್ರೀಡಾಂಗಣವನ್ನು ಭರ್ತಿಗೊಳಿಸಲು ಪ್ರತಿ ಪಂದ್ಯದಲ್ಲೂ ತಪಾಸಣೆ ನಡೆಸುವುದಾಗಿ ಬಂಡೆಸ್‌ಲಿಗಾ ಕ್ಲಬ್‌ ಹೇಳಿದೆ. ’ಪಂದ್ಯ ಶುರುವಾಗುವ 24 ಗಂಟೆಯೊಳಗೆ ಪ್ರತಿ ಪ್ರೇಕ್ಷಕರು ತಪಾಸಣೆಗೆ ಒಳಗಾಗಿ ’ಕೊರೊನಾ ನೆಗೆಟಿವ್‌‘ ಎಂದು ಖಚಿತಪಡಿಸಿಕೊಂಡು ಬರಬೇಕು‘ ಎಂದು ಕ್ಲಬ್‌ ತಿಳಿಸಿದೆ.

ಈ ಋತುವಿನಲ್ಲಿ ಜರ್ಮನಿಯಲ್ಲಿ ನಡೆಯುವ ಲೀಗ್‌ಗಳು ಸೆಪ್ಟೆಂಬರ್‌ 18ರಿಂದ ಆರಂಭಗೊಳ್ಳುವ ಸಾಧ್ಯತೆಯಿದೆ. ಇತರ ಕ್ಲಬ್‌ಗಳು ಅಂತರ ಕಾಯ್ದುಕೊಳ್ಳುವ ವ್ಯವಸ್ಥೆಯನ್ನು ರೂಪಿಸಿ ಪಂದ್ಯ ಆಡಿಸಿವೆ. ಆದರೆ ಜರ್ಮನ್‌ ಯೂನಿಯನ್‌ನ‌ ಬಹುತೇಕ ಕ್ರೀಡಾಂಗಣಗಳ ಗ್ಯಾಲರಿಗಳಲ್ಲಿ ಪ್ರೇಕ್ಷಕರು ಒತ್ತೊತ್ತಾಗಿ ಕೂಡುವಂತಹ ಆಸನ ವ್ಯವಸ್ಥೆ ಇದೆ.

’ನಮ್ಮ ಕ್ರೀಡಾಂಗಣಗಳಲ್ಲಿ ಅಂತರ ಕಾಪಾಡುವುದಕ್ಕೆ ಸಾಧ್ಯವಿಲ್ಲ. ಪ್ರೇಕ್ಷಕರ ಹರ್ಷೋದ್ಗಾರಕ್ಕೆ ಅವಕಾಶ ಇಲ್ಲದಿದ್ದರೆ ಅದು ಯೂನಿಯನ್‌ ಎನಿಸಿಕೊಳ್ಳುವುದಿಲ್ಲ. ಯಾವೊಬ್ಬ ಸೋಂಕಿತರು ಕ್ರೀಡಾಂಗಣ ಪ್ರವೇಶಕ್ಕೆ ಅವಕಾಶ ಕೊಡಬಾರದು. ಯೂನಿಯನ್‌ ಕ್ಲಬ್‌ನ ಸದಸ್ಯರು ಮತ್ತು ಅಭಿಮಾನಿಗಳಿಗೂ ಇದು ಅನ್ವಯಿಸುತ್ತದೆ‘ ಎಂದು ಕ್ಲಬ್‌ನ ಅಧ್ಯಕ್ಷ ಡರ್ಕ್‌ ಜಿಂಗ್ಲರ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು