ಭಾನುವಾರ, ಸೆಪ್ಟೆಂಬರ್ 27, 2020
27 °C

ಅಕ್ಟೋಬರ್‌ 8ರಿಂದ ಐ–ಲೀಗ್ ಅರ್ಹತಾ ಟೂರ್ನಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಐ–ಲೀಗ್‌ನ ಅರ್ಹತಾ ಪಂದ್ಯಗಳು ಅಕ್ಟೋಬರ್ ಎಂಟರಂದು ಇಲ್ಲಿ ಆರಂಭಗೊಳ್ಳಲಿದ್ದು ಭಾರತದಲ್ಲಿ ಫುಟ್‌ಬಾಲ್ ಕ್ರೀಡೆಗೆ ಈ ಮೂಲಕ ಮರುಚಾಲನೆ ಸಿಗಲಿದೆ. ಈ ವಿಷಯವನ್ನು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಬುಧವಾರ ತಿಳಿಸಿದೆ.

ಐ–ಲೀಗ್‌ನಲ್ಲಿ ಬಾಕಿ ಉಳಿದಿರುವ ಒಂದು ಸ್ಥಾನಕ್ಕಾಗಿ ಐದು ತಂಡಗಳು ಸೆಣಸಲಿದ್ದು ನಗರದ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣ ಮತ್ತು ಕಲ್ಯಾಣಿಯ ನಗರಪಾಲಿಕೆ ಕ್ರೀಡಾಂಗಣ ಈ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.

ರೌಂಡ್ ರಾಬಿನ್ ಮಾದರಿಯ ಅರ್ಹತಾ ಟೂರ್ನಿಯಲ್ಲಿ ಎಆರ್‌ಎ ಎಫ್‌ಸಿ, ಭವಾನಿಪುರ್ ಎಫ್‌ಸಿ, ಗರ್ವಾಲ್ ಎಫ್‌ಸಿ, ಎಫ್‌ಸಿ ಬೆಂಗಳೂರು ಮತ್ತು ಮೊಹಮ್ಮಡನ್ ಎಸ್‌ಸಿ ತಂಡಗಳು ಕಣಕ್ಕೆ ಇಳಿಯಲಿವೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸುವ ತಂಡ ಲೀಗ್‌ನಲ್ಲಿ ಆಡಲು ಅರ್ಹತೆ ಗಳಿಸಲಿದೆ.

ಕೋವಿಡ್ –19ರಿಂದಾಗಿ ದೇಶಿ ಟೂರ್ನಿಗಳನ್ನು ಎರಡು ತಿಂಗಳ ಕಾಲ ಮುಂದೂಡಲಾಗಿತ್ತು. ಕ್ಲಬ್‌ಗಳು ಆಟಗಾರರನ್ನು ಬದಲಿಸಿಕೊಳ್ಳಲು ಆಗಸ್ಟ್ ಒಂದರಿಂದ ಅವಕಾಶ ನೀಡಲಾಗಿದ್ದು ಅಕ್ಟೋಬರ್ 31ರ ವರೆಗೆ ಮುಂದುವರಿಯಲಿದೆ.

‘ಐ–ಲೀಗ್‌ ಪಶ್ಚಿಮ ಬಂಗಾಳದ ಕೆಲವೇ ಕೆಲವು ಅಂಗಣಗಳಲ್ಲಿ ನವೆಂಬರ್‌ನಲ್ಲಿ ನಡೆಯಲಿವೆ‘ ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ ಲೀಗ್‌ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನಂದೊ ಧರ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು