ಶನಿವಾರ, ಏಪ್ರಿಲ್ 4, 2020
19 °C

ಫುಟ್‌ಬಾಲ್: ಇಗ್ನಿಷ್ ಜಾನ್ ಹ್ಯಾಟ್ರಿಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇಗ್ನಿಷ್ ಜಾನ್ ಗಳಿಸಿದ ಹ್ಯಾಟ್ರಿಕ್ ಗೋಲುಗಳಿಂದ ಬೆಂಗಳೂರು ಮಾರ್ಸ್ ಎಫ್‌ಸಿ ತಂಡ ಬಿಡಿಎಫ್ಎ ‘ಬಿ’ ಡಿವಿಷನ್ ಫುಟ್‌ಬಾಲ್ ಲಿಗ್ ಚಾಂಪಿಯನ್‌ಷಿಪ್‌ನಲ್ಲಿ ಗೆಲುವು ಸಾಧಿಸಿತು.

ಹಲಸೂರಿನ ಸೌತ್ ಯುನೈಟೆಡ್ ಅಕಾಡೆಮಿ ಮೈದಾನದಲ್ಲಿ ಸೋಮವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ತಿಲಕ್ ಮೆಮೋರಿಯಲ್ ಎಫ್‌ಸಿ ವಿರುದ್ಧ ಮಾರ್ಸ್ ಎಫ್‌ಸಿ 3–2 ಗೋಲುಗಳಿಂದ ಜಯ ಸಾಧಿಸಿತು. ಇಗ್ನಿಷ್ ಜಾನ್ 13, 16 ಮತ್ತು 70+2ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ತಿಲಕ್ ಎಫ್‌ಸಿ ಪರ ಅನೀಷ್ (60ನೇ ನಿ) ಮತ್ತು ಮನೋಜ್ (64ನೇ ನಿ) ಗೋಲು ಗಳಿಸಿದರು.

ಮತ್ತೊಂದು ಪಂದ್ಯದಲ್ಲಿ ಫ್ರೆಂಡ್ಸ್ ಯುನೈಟೆಡ್ ಎಫ್‌ಸಿ 6–1ರಲ್ಲಿ ವೆಹಿಕಲ್ಸ್ ಎಫ್‌ಸಿಯನ್ನು ಮಣಿಸಿತು. ವಿಜಯಿ ತಂಡದ ಪರ ಗಾಡ್ವಿನ್ (14 ಮತ್ತು 70ನೇ ನಿಮಿಷ), ಪ್ರೀಪ್ ಕುಮಾರ್ (28, 70ನೇ ನಿ; ಪೆನಾಲ್ಟಿ) ಸ್ಟ್ಯಾಲಿನ್ (34, 54ನೇ ನಿಮಿಷ) ಗೋಲು ಗಳಿಸಿದರೆ ವೆಹಿಕಲ್ಸ್‌ಗಾಗಿ ಸಂತೋಷ್ (33ನೇ ನಿ) ಗೋಲು ಗಳಿಸಿದರು.

ಇಂದಿನ ಪಂದ್ಯಗಳು
ಸನ್‌ರೈಸ್ ಎಫ್‌ಸಿ–ಡಿವೈಇಎಸ್‌ ಎಫ್‌ಸಿ (’ಎ’ ಗುಂಪು)
ಮಧ್ಯಾಹ್ನ 2ರಿಂದ

ಎಚ್‌ಎಎಲ್‌ ಎಫ್‌ಸಿ –ಬ್ಲಿಟ್ಜ್ ಎಫ್‌ಸಿ (‘ಬಿ’ ಗುಂಪು)
ಮಧ್ಯಾಹ್ನ 3.30ರಿಂದ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು