ಯೆನೆಪೋಯ ‘ಎ’ ತಂಡ ಪದುವಾ ಕಾಲೇಜು ವಿರುದ್ಧ 5–0ಯಿಂದ ಜಯ ಗಳಿಸಿದರೆ ‘ಬಿ’ ತಂಡ ಎಸ್‌ಡಿಎಂ ಕಾಲೇಜು ಎದುರು 3–1ರಿಂದ ಗೆದ್ದಿತು. ಪಿಎ ಕಾಲೇಜು ‘ಎ’ ತಂಡ ಎಂ.ವಿ.ಶೆಟ್ಟಿ ಇನ್‌ಸ್ಟಿಟ್ಯೂಷನ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ (3–1), ‘ಬಿ’ ತಂಡ ಶ್ರೀನಿವಾಸ ಕ್ಯಾಂಪಸ್ ವಿರುದ್ಧ 1–0ಯಿಂದ ಗೆಲುವು ಸಾಧಿಸಿತು. ಸಹ್ಯಾದ್ರಿ ಕಾಲೇಜು 4–1ರಿಂದ ಬದ್ರಿಯಾ ಪ್ರಥಮ ದರ್ಜೆ ಕಾಲೇಜನ್ನು, ಟಿಪ್ಪು ಸುಲ್ತಾನ್ ಕಾಲೇಜು 3–0ಯಿಂದ ಎಜೆ ವೈದ್ಯಕೀಯ ಕಾಲೇಜನ್ನು, ಮಂಗಳಾ ಇನ್‌ಸ್ಟಿಟ್ಯೂಷನ್ ‘ಎ’ ತಂಡ 1–0ಯಿಂದ ಮಿಲಾಗ್ರಿಸ್ ಕಾಲೇಜನ್ನು ಮಣಿಸಿತು.