ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ ಅರ್ಹತಾ ಟೂರ್ನಿ: ಭಾರತ–ಅಫ್ಗನ್ ಹಣಾಹಣಿ ಗೋಲಿಲ್ಲದೇ ಡ್ರಾ

ವಿಶ್ವಕಪ್‌ ಅರ್ಹತಾ ಟೂರ್ನಿಯ ‘ಎ’ ಗುಂಪಿನ ಪಂದ್ಯ
Published 22 ಮಾರ್ಚ್ 2024, 11:40 IST
Last Updated 22 ಮಾರ್ಚ್ 2024, 11:40 IST
ಅಕ್ಷರ ಗಾತ್ರ

ಅಭಾ (ಸೌದಿ ಅರೇಬಿಯಾ),: ಭಾರತ ಮತ್ತು ಅಫ್ಗಾನಿಸ್ತಾನ ತಂಡಗಳ ನಡುವೆ 2026ರ ಫೀಫಾ ವಿಶ್ವ ಕಪ್‌ ಅರ್ಹತಾ ಟೂರ್ನಿಯ ‘ಎ’ ಗುಂಪಿನ ಪಂದ್ಯ ಗುರುವಾರ ತಡರಾತ್ರಿ ಗೋಲಿಲ್ಲದೇ ‘ಡ್ರಾ’ ಆಯಿತು.

ಮೊದಲಾರ್ಧದಲ್ಲಿ ತೀವ್ರ ಹೋರಾಟ ಕಂಡ ಪಂದ್ಯದಲ್ಲಿ ಭಾರತದ ಮನ್ವೀರ್ ಸಿಂಗ್ ಗೋಲು ಗಳಿಸುವ ಎರಡು ಅವಕಾಶಗಳಲ್ಲಿ ಎಡವಿದರು. ಅಫ್ಗಾನಿಸ್ತಾನವೂ ಒಂದೆರಡು ಅವಕಾಶ ಪಡೆಯಿತು.4

ಈ ಫಲಿತಾಂಶದ ನಂತರ ಭಾರತ ಮೂರು ಪಂದ್ಯಗಳಿಂದ ನಾಲ್ಕು ಅಂಕ ಸಂಗ್ರಹಿಸಿ ಗುಂಪಿನಲ್ಲಿ ಎರಡನೇ ಸ್ಥಾನಕ್ಕೇರಿತು. ಕುವೈತ್‌ ಇಷ್ಟೇ ಪಂದ್ಯಗಳಿಂದ ಮೂರು ಪಾಯಿಂಟ್ಸ್‌ ಕಲೆಹಾಕಿದೆ. ಕತಾರ್‌ ಮೊದಲ ಸ್ಥಾನದಲ್ಲಿದ್ದು, ಅಫ್ಗಾನಿಸ್ತಾನ ಕೊನೆಯ ಸ್ಥಾನದಲ್ಲಿದೆ. ಕೊನೆಯ ಲೀಗ್‌ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಮುಂದಿನ ಹಂತಕ್ಕೇರುವ ಉತ್ತಮ ಅವಕಾಶವಿದೆ.

ಭಾರತ ಗುವಾಹಟಿಯಲ್ಲಿ ಮಾರ್ಚ್‌ 26ರಂದು ಅಫ್ಗಾನಿಸ್ತಾನದ ವಿರುದ್ಧ ತನ್ನ ತವರಿನ ಪಂದ್ಯ ಆಡಲಿದೆ. ಈ ಪಂದ್ಯದ ಗೆಲುವು ಭಾರತದ ಪಾಲಿಗೆ ನಿರ್ಣಾಯಕ.

ದಮಾಕ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರಂಭದಲ್ಲಿ ಸ್ವಲ್ಪ ಒರಟಾಟವೂ ಕಂಡುಬಂತು. ಅಫ್ಗಾನ್ ಆಟಗಾರರು ವೇಗ ಮತ್ತು ದೈಹಿಕ ಬಲದ ನೆರವಿನಿಂದ ಮೇಲುಗೈಗೆ ಪ್ರಯತ್ನಿಸಿದರು. ಭಾರತ ಆಟಗಾರರು ಚುರುಕಿನ ಪಾಸ್‌ಗಳ ಮೂಲಕ ಹಿಡಿತ ಪಡೆಯಲು ಯತ್ನಿಸಿದರು.

ಜನವರಿಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದ ವಿಕ್ರಮ್ ಪ್ರತಾಪ್ ಸಿಂಗ್‌ ಮೊದಲ ಬಾರಿ ಆಡುವ 11ರಲ್ಲಿ ಸ್ಥಾನ ಪಡೆದರು. ಅಫ್ಗಾನ್‌ ರಕ್ಷಣಾ ವಿಭಾಗವನ್ನು ಕಾಡಿದರು. 17ನೇ ನಿಮಿಷ ಮನ್ವೀರ್ ಉತ್ತಮ ಅವಕಾಶದಲ್ಲಿ ಎಡವಿದರು. ವಿರಾಮಕ್ಕೆ ಮೊದಲು ಮತ್ತೊಂದು ಅವಕಾಶದಲ್ಲಿ ಲಲಿಯನ್‌ಝುವಾಲಾ ಛಾಂಗ್ಟೆ ಅವರ ಅಡ್ಡಪಾಸ್‌ನಲ್ಲಿ ಗೋಲಿಗೆ ಯತ್ನಿಸಿದರೂ, ಚೆಂಡು ಗೋಲಿನಾಚೆ ಹೋಯಿತು.

ಭಾರತದ ಸ್ವಲ್ಪ ಹಿಡಿತದ ಹೊರತೂ ಅಫ್ಗಾನಿಸ್ತಾನ ತಂಡ ಕೆಲವು ಅವಕಾಶ ಪಡೆದಯಿತು. ಮೊಸಾವೆರ್‌ ಅಹದಿ ಇಂಥ ಒಂದು ಯತ್ನದಲ್ಲಿ ಎಡಗಾಲಿನಿಂದ ಬಲವಾಗಿ ಒದ್ದ ಚೆಂಡನ್ನು ಗುರುಪ್ರೀತ್ ಸಿಂಗ್ ಎರಡೂ ಕೈಗಳಿಂದ ಬಾಚಿಹಿಡಿದರು.

ಮೊದಲಾರ್ಧದಲ್ಲಿ ಮನ್ವೀರ್ ವಿಫಲರಾದರೆ, ಉತ್ತರಾರ್ಧದಲ್ಲಿ ವಿಕ್ರಮ್ ಪ್ರತಾಪ್ ಕೆಲವು ಅವಕಾಶಗಳನ್ನು ವ್ಯರ್ಥಪಡಿಸಿದರು. 62ನೇ ನಿಮಿಷ ಅಫ್ಗಾನಿಸ್ತಾನದ ರಹಮದ್‌ ಅಕ್ಬರಿ ಅವರ ಕೆಳಮಟ್ಟದ ಕ್ರಾಸ್‌ನಲ್ಲಿ ಒಮಿಡ್‌ ಪೊಪಲಾಝೆ ಬಾಕ್ಸ್ ಸಮೀಪದಿಂದ ಗೋಲಿಗೆ ಯತ್ನ ನಡೆಸಿದರೂ, ರಾಹುಲ್‌ ಭೆಕೆ ಸಕಾದಲ್ಲಿ ಅಡ್ಡವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT