ಚಿಯಾಂಗ್ ಮೈ (ಥಾಯ್ಲೆಂಡ್): ಸಂಗೀತಾ ಬಾಸ್ಫೋರ್ ಅವರ ಅಮೋಘ ಆಟದ ನೆರವಿನಿಂದ ಭಾರತ ಮಹಿಳಾ ಫುಟ್ಬಾಲ್ ತಂಡವು 2–1 ಗೋಲುಗಳಿಂದ ತನಗಿಂತ ಮೇಲಿನ ಕ್ರಮಾಂಕದ ಥಾಯ್ಲೆಂಡ್ ತಂಡವನ್ನು ಮಣಿಸಿ ಮುಂದಿನ ವರ್ಷ ನಡೆಯುವ ಎಎಫ್ಸಿ ಏಷ್ಯನ್ ಕಪ್ ಟೂರ್ನಿಗೆ ಅರ್ಹತೆ ಪಡೆಯಿತು.

ಇಲ್ಲಿ ಚಿಯಾಂಗ್ ಮೈ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತದ ಪರ ಸಂಗೀತಾ ಎರಡು ಗೋಲು ಗಳಿಸಿ ಗೆಲುವಿನ ರೂವಾರಿಯಾದರು. ಭಾರತ ತಂಡವು ಅರ್ಹತಾ ಸುತ್ತಿನ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದಂತಾಗಿದೆ. ಈ ಮೂಲಕ ಬಿ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿತು.

ಭಾರತವು ಮೊದಲ ಬಾರಿ ಕ್ವಾಲಿಫೈಯರ್ ಮೂಲಕ ಏಷ್ಯನ್ ಕಪ್ ಟೂರ್ನಿಗೆ ಅರ್ಹತೆ ಸಂಪಾದಿಸಿದೆ. ಆಸ್ಟ್ರೇಲಿಯಾದ ಆತಿಥ್ಯದಲ್ಲಿ ಟೂರ್ನಿಯು 2026ರಲ್ಲಿ ನಡೆಯಲಿದೆ. 2022ರ ನಂತರ ಭಾರತವು ಏಷ್ಯನ್ ಕಪ್ನಲ್ಲಿ ಮೊದಲ ಬಾರಿಗೆ ಟಿಕೆಟ್ ಪಡೆದಿದೆ.

ಮಹಿಳಾ ಫುಟ್ಬಾಲ್ ಇತಿಹಾಸದಲ್ಲಿ ಥಾಯ್ಲೆಂಡ್ ತಂಡದ ವಿರುದ್ಧ ಭಾರತಕ್ಕೆ ಇದು ಮೊದಲ ಗೆಲುವಾಗಿದೆ. ಕಳೆದ ವರ್ಷ ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಭಾರತ 0-1 ಅಂತರದಿಂದ ಥಾಯ್ಲೆಂಡ್ಗೆ ಮಣಿದಿತ್ತು.

ಭಾರತ ತಂಡವು ಗಳಿಸಿದ ಈ ಅರ್ಹತೆಯು 2027ರ ಫಿಫಾ ಮಹಿಳಾ ವಿಶ್ವಕಪ್ಗೆ ಮೊದಲ ಬಾರಿ ಅರ್ಹತೆ ಪಡೆಯುವ ಅವಕಾಶದ ಬಾಗಿಲು ತೆರೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.