ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಎಫ್‌ಸಿ ಏಷ್ಯಾ ಕಪ್ : ಭಾರತ– ಸಿರಿಯಾ ಪಂದ್ಯ ಜ.23ಕ್ಕೆ

Published : 22 ಜನವರಿ 2024, 15:12 IST
Last Updated : 22 ಜನವರಿ 2024, 15:12 IST
ಫಾಲೋ ಮಾಡಿ
Comments

ಅಲ್‌ ಖೋರ್ (ಕತಾರ್‌): ಗುಂಪಿನಲ್ಲಿ ಆಡಿದ ಮೊದಲ ಎರಡು ಪಂದ್ಯಗಳನ್ನು ಸೋತ ನಂತರ ಭಾರತ ತಂಡ, ಎಎಫ್‌ಸಿ ಏಷ್ಯಾ ಕಪ್ ಟೂರ್ನಿಯಲ್ಲಿ ಮಂಗಳವಾರ ಸಿರಿಯಾ ತಂಡವನ್ನು ಎದುರಿಸಲಿದೆ. ನಾಕ್‌ಔಟ್‌ ಪ್ರವೇಶಕ್ಕೆ ಇರುವ ಕ್ಷೀಣ ಅವಕಾಶವನ್ನು ಜೀವಂತವಾಗಿರಿಸಲು ಸಿರಿಯಾ ವಿರುದ್ಧ ಪಂದ್ಯವನ್ನು ಭಾರತ ಗೆಲ್ಲಲೇಬೇಕಿದೆ.

ಆಸ್ಟ್ರೇಲಿಯಾ ವಿರುದ್ಧ ಹೋರಾಟ ತೋರಿದ್ದರೂ 0–2 ರಿಂದ ಸೋತಿದ್ದ ಭಾರತ, ನಂತರ 0–3 ರಿಂದ ಉಜ್ಬೇಕಿಸ್ತಾನ ಎದುರೂ ಪರಾಜಯ ಕಂಡಿತ್ತು. ಈಗ ಸುನೀಲ್ ಚೆಟ್ರಿ ಬಳಕ್ಕೆ ಮಂಗಳವಾರದ ಪಂದ್ಯದಲ್ಲಿ ಸ್ವಲ್ಪವಾದರೂ ಗೌರವ ಉಳಿಸಿಕೊಳ್ಳಲು ಗೆಲುವಷ್ಟೇ ನೆರವಾಗಬಹುದು.

ಫಿಫಾ ವಿಶ್ವ ಕ್ರಮಾಂಕದಲ್ಲಿ ಸಿರಿಯಾ 91ನೇ ಸ್ಥಾನದಲ್ಲಿದೆ. ಭಾರತ 102ನೇ ಸ್ಥಾನದಲ್ಲಿದೆ. ಆದರೆ ಗೆಲುವು ಕೈಗೆಟಕದ್ದೇನಲ್ಲ. ಈ ಹಿಂದೆ ಭಾರತ 2007, 2009 ಮತ್ತು 2012ರ ವಿಶ್ವಕಪ್‌ನಲ್ಲಿ ಈ ತಂಡದ ವಿರುದ್ಧ ಜಯಗಳಿಸಿದೆ. ಅಹಮದಾಬಾದಿನಲ್ಲಿ ಕೊನೆಯ ಸಲ ಮುಖಾಮುಖಿ ಆದ ಸಂದರ್ಭದಲ್ಲಿ (ಇಂಟರ್‌ಕಾಂಟಿನೆಂಟಲ್ ಕಪ್‌) ಪಂದ್ಯ 1–1 ‘ಡ್ರಾ’ ಆಗಿತ್ತು.

ಅಲ್‌ ಬೈಟ್‌ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಸಿರಿಯಾ ಮೇಲೆ ಗೆದ್ದಲ್ಲಿ ಭಾರತ ಗುಂಪಿನಲ್ಲಿ ಮೂರನೇ ಸ್ಥಾನ ಪಡೆಯಲಿದೆ. ಆದರೆ ಇದರಿಂದ ನಾಕೌಟ್‌ ಪ್ರವೇಶಕ್ಕೆ ಖಾತರಿಯಿಲ್ಲ. ಪಾಯಿಂಟ್‌ ಆಧಾರದ ಮೇಲೆ ಟೈ ಆದಲ್ಲಿ ಆಗ ಗೋಲು ವ್ಯತ್ಯಾಸ ಗಣನೆಗೆ ಬರಲಿದೆ. ಗುರುವಾರ ಕೊನೆಯ ಲೀಗ್‌ ಪಂದ್ಯಗಳ ನಂತರ ಸ್ಪಷ್ಟ ಚಿತ್ರಣ ದೊರೆಯಲಿದೆ. ಸಿರಿಯಾ ಕೂಡ ಎರಡು ಪಂದ್ಯಗಳಲ್ಲಿ ಗೆಲುವು ಕಂಡಿಲ್ಲ  ಎಂಬುದಷ್ಟೇ ಭಾರತಕ್ಕೆ ಇರುವ ಸಮಾಧಾನ.

ಆಸ್ಟ್ರೇಲಿಯಾ ವಿರುದ್ಧ ರಕ್ಷಣಾತ್ಮಕ ತಂತ್ರಕ್ಕೆ ಒತ್ತು ನೀಡಿದ್ದ ಭಾರತ, ಎರಡನೇ ಪಂದ್ಯದಲ್ಲಿ ಸ್ವಲ್ಪ ಆಕ್ರಮಣಕಾರಿಯಾಗಿ ಆಡಲು ಯತ್ನಿಸಿತ್ತು. ಆದರೆ ರಕ್ಷಣೆಯಲ್ಲಿನ ಲೋಪಗಳು ದುಬಾರಿಯಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT