ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಫ್‌: ಭಾರತಕ್ಕೆ ಭೂತಾನ್‌ ಸವಾಲು

Last Updated 16 ಡಿಸೆಂಬರ್ 2022, 13:22 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಮಹಿಳಾ ತಂಡದವರು ಸ್ಯಾಫ್‌ 20 ವರ್ಷದೊಳಗಿನವರ ಫುಟ್‌ಬಾಲ್‌ ಟೂರ್ನಿಯಲ್ಲಿ ಭೂತಾನ್‌ ವಿರುದ್ಧದ ಪಂದ್ಯದೊಂದಿಗೆ ಪ್ರಶಸ್ತಿಯೆಡೆಗಿನ ಅಭಿಯಾನ ಆರಂಭಿಸಲಿದ್ದಾರೆ.

ಸ್ಯಾಫ್‌ ಟೂರ್ನಿ ಢಾಕಾದಲ್ಲಿ ಮುಂದಿನ ವರ್ಷ ಫೆ.3 ರಿಂದ 9ರ ವರೆಗೆ ನಡೆಯಲಿದೆ. ಭಾರತ– ಭೂತಾನ್‌ ಪಂದ್ಯ ಫೆ.3 ರಂದು ನಡೆಯಲಿದೆ.

ಭಾರತ ತಂಡ ಆ ಬಳಿಕ ಫೆ.5 ರಂದು ಬಾಂಗ್ಲಾದೇಶ ಹಾಗೂ ಫೆ.7 ರಂದು ನೇಪಾಳ ವಿರುದ್ಧ ಪೈಪೋಟಿ ನಡೆಸಲಿದೆ. ಫೆ.9 ರಂದು ಫೈನಲ್ ನಡೆಯಲಿದೆ. ರೌಂಡ್‌ ರಾಬಿನ್‌ ಲೀಗ್‌ ಬಳಿಕ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಪ್ರಶಸ್ತಿಗೆ ಪೈಪೋಟಿ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT