ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್: ದಾಖಲೆ ಸಮಗಟ್ಟಿದ ಸುನಿಲ್ ಚೆಟ್ರಿ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌: ಬೆಂಗಳೂರು–ಗೋವಾ ಪಂದ್ಯ ಡ್ರಾ
Last Updated 24 ಜನವರಿ 2022, 7:37 IST
ಅಕ್ಷರ ಗಾತ್ರ

ಬ್ಯಾಂಬೊಲಿಮ್‌: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಎಂಟನೇ ಆವೃತ್ತಿಯಲ್ಲಿ ಮೊದಲ ಗೋಲು ದಾಖಲಿಸಿದ ನಾಯಕ ಸುನಿಲ್ ಚೆಟ್ರಿ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡದ ಸೋಲನ್ನು ತಪ್ಪಿಸಿದರು. ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಬಿಎಫ್‌ಸಿ ಮತ್ತು ಎಫ್‌ಸಿ ಗೋವಾ ನಡುವಿನ ಪಂದ್ಯ 1–1ರಲ್ಲಿ ಡ್ರಾ ಆಯಿತು.

ಜಿದ್ದಾಜಿದ್ದಿಯ ಹಣಾಹಣಿಯ 41ನೇ ನಿಮಿಷದಲ್ಲಿ ಡೈಲನ್‌ ಫಾಕ್ಸ್‌ ಗಳಿಸಿದ ಗೋಲಿನೊಂದಿಗೆ ಗೋವಾ ಮುನ್ನಡೆ ಸಾಧಿಸಿತ್ತು. 61ನೇ ನಿಮಿಷದಲ್ಲಿ ಚೆಟ್ರಿ ಚೆಂಡನ್ನು ಗುರಿ ಸೇರಿಸಿ ಸಮಬಲದ ಗೋಲು ತಂದುಕೊಟ್ಟರು. ಇದು ಐಎಸ್‌ಎಲ್‌ನಲ್ಲಿ ಅವರ 48ನೇ ಗೋಲು. ಈ ಮೂಲಕ ಲೀಗ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಫೆರಾನ್ ಕೊರೊಮಿನಾಸ್ ದಾಖಲೆಯ ಸಮಗಟ್ಟಿದರು.

ಬಲಬದಿಯಲ್ಲಿ ಪ್ರಿನ್ಸ್ ಇಬಾರ ಮೋಹಕ ಆಟವಾಡಿ ಸುನಿಲ್ ಚೆಟ್ರಿಯ ಕಡೆಗೆ ಚೆಂಡನ್ನು ಕ್ರಾಸ್ ಮಾಡಿದರು. ಚೆಟ್ರಿ ಬಲಶಾಲಿಯಾಗಿ ಹೆಡ್‌ ಮಾಡಿ ಗುರಿ ಮುಟ್ಟಿಸಿದರು.

ಫತೋರ್ಡದಲ್ಲಿ ರಾತ್ರಿ ನಡೆದ ಎಟಿಕೆ ಮೋಹನ್ ಬಾಗನ್ ಮತ್ತು ಒಡಿಶಾ ಎಫ್‌ಸಿ ನಡುವಿನ ಪಂದ್ಯ ಗೋಲುರಹಿತ ಡ್ರಾದಲ್ಲಿ ಕೊನೆಗೊಂಡಿತು.

ಇಂದಿನ ಪಂದ್ಯ
ಈಸ್ಟ್ ಬೆಂಗಾಲ್‌–ಹೈದರಾಬಾದ್ ಎಫ್‌ಸಿ
ಸ್ಥಳ: ತಿಲಕ್ ಮೈದಾನ್
ಆರಂಭ: ರಾತ್ರಿ 7.30
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT