ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಸಮವಸ್ತ್ರದಲ್ಲಿ ಫುಟ್‌ಬಾಲ್‌ ಆಟಗಾರ್ತಿ

ಕೋವಿಡ್‌–19: ಸರ್ಕಾರದ ಮಾರ್ಗಸೂಚಿಗಳ ಪಾಲಿಸಲು ಇಂದುಮತಿ ಮನವಿ
Last Updated 26 ಮೇ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಪಿಡುಗಿನ ವಿರುದ್ಧದ ಹೋರಾಟಕ್ಕೆ ಭಾರತ ಮಹಿಳಾ ಫುಟ್‌ಬಾಲ್‌ ತಂಡದ ಆಟಗಾರ್ತಿ ಇಂದುಮತಿ ಕದಿರೆಸಾನ್‌ ಅವರೂಕೈಜೋಡಿಸಿದ್ದಾರೆ. ಲಾಕ್‌ಡೌನ್‌ ಕಾರಣ ಸಹ ಆಟಗಾರ್ತಿಯರು ಮನೆಯಲ್ಲೇ ಬಂದಿಯಾಗಿದ್ದರೆ, ಇಂದುಮತಿ ಪೊಲೀಸ್‌ ಸಮವಸ್ತ್ರಧರಿಸಿ, ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವಂತೆಜನರಲ್ಲಿ ಕೇಳಿಕೊಳ್ಳುತ್ತಿದ್ದಾರೆ.

ಚೆನ್ನೈನಲ್ಲಿ, ತಮಿಳುನಾಡು ಪೊಲೀಸ್‌ ಇಲಾಖೆಯ ಸಾಂಪ್ರದಾಯಿಕ ಖಾಕಿ, ಸರ್ಜಿಕಲ್‌ ಮಾಸ್ಕ್‌, ಕೈಗವಸು ಧರಿಸಿದ್ದ ಅವರನ್ನು ಜನರು ಗುರುತಿಸಿದ್ದಾರೆ.

‘ಇಡೀ ದೇಶವು ಈಗ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿದೆ. ಪ್ರತಿಯೊಬ್ಬರ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯವಾಗಿದೆ’ ಎಂದು ಇಂದುಮತಿ ಹೇಳಿದ್ದಾಗಿ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ನ (ಎಐಎಫ್‌ಎಫ್‌) ವೆಬ್‌ಸೈಟ್‌ ಉಲ್ಲೇಖಿಸಿದೆ.

25 ವರ್ಷದ ಮಿಡ್‌ಫೀಲ್ಡರ್‌ ಇಂದುಮತಿ ಅವರು ಭಾರತ ತಂಡದಲ್ಲಿ ಶಿಸ್ತಿಗೆ ಹೆಸರಾದವರು.

‘ಇದು ರಾಷ್ಟ್ರದ ಒಳಿತಿಗಾಗಿ ಕರೆ. ಕೋವಿಡ್‌ ಎದುರು ದೇಶ ನಡೆಸುತ್ತಿರುವ ಹೋರಾಟದಲ್ಲಿ ಪ್ರತಿದಿನ ಪಾಲ್ಗೊಳ್ಳಬೇಕು’ ಎಂದು ಇಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT