ಸೋಮವಾರ, ಜುಲೈ 4, 2022
21 °C

ಐಎಸ್‌ಎಲ್: ಮುಂಬೈಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಂಬೊಲಿಮ್‌: ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿರುವ ಮುಂಬೈ ಸಿಟಿ ತಂಡವು ಬುಧವಾರ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಮತ್ತೊಂದು ಜಯದ ಸಿಹಿ ಸವಿಯಿತು.

ಜಿಎಂಸಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಸಿಟಿ ತಂಡವು 2–1 ಗೋಲುಗಳಿಂದ ಚೆನ್ನೈಯಿನ್ ಎಫ್ ಸಿ ವಿರುದ್ಧ ಗೆದ್ದಿತು. ಮುಂಬೈಗೆ ಇದು ನಾಲ್ಕನೇ ಜಯವಾಗಿದೆ.

ಚೆನ್ನೈ ಪರ 40ನೇ ನಿಮಿಷದಲ್ಲಿ ಜೇಕಬ್ ಸಿಲ್ವೆಸ್ಟ್ರಾ ಗೋಲು ದಾಖಲಿಸಿದರು. ಮುಂಬೈ ತಂಡದ ಹರ್ಮನ್ ಸಂತಾನಾ (45+4ನಿ) ಕಾಲ್ಚಳಕ ತೋರಿದರು. 75ನೇ ನಿಮಿಷದಲ್ಲಿ ಆ್ಯಡಂ ಫಾಂಡ್ರೆ ಮುಂಬೈಗೆ ಮತ್ತೊಂದು ಗೋಲು ತಂದರು. ವಾಸ್ಕೋದಲ್ಲಿ ಗುರುವಾರ ಈಸ್ಟ್ ಬೆಂಗಾಲ್– ಜಮ್ಶೆಡ್‌ಪುರ ಎಫ್‌ಸಿ ಸೆಣಸಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು