ಚೆನ್ನೈ: ಪ್ರಬಲ ಪೈಪೋಟಿ ಕಂಡ ಪಂದ್ಯದಲ್ಲಿ ಬೆಂಗಳೂರು ಫುಟ್ ಬಾಲ್ ಕ್ಲಬ್ (ಬಿಎಫ್‌ಸಿ) ಮತ್ತು ಚೆನ್ನೈ ಯಿನ್ ಫುಟ್‌ಬಾಲ್ ಕ್ಲಬ್ (ಸಿಎಫ್‌ಸಿ) ತಂಡಗಳು ಗೋಲು ರಹಿತ ಡ್ರಾಗೆ ತೃಪ್ತಿಪಟ್ಟುಕೊಂಡವು.

ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಪಂದ್ಯದ ನಂತರ ಉಭಯ ತಂಡಗಳು ತಲಾ ಒಂದೊಂದು ಪಾಯಿಂಟ್ ಹಂಚಿಕೊಂಡವು. ಈ ಫಲಿತಾಂಶದೊಂದಿಗೆ ಬಿಎಫ್‌ಸಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲೇ ಉಳಿಯಿತು.

ತಂಡದ ಬಳಿ ಈಗ 16 ಪಂದ್ಯಗಳಿಂದ 29 ಪಾಯಿಂಟ್‌ಗಳಿವೆ. ಸಿಎಫ್‌ಸಿ 15 ಪಂದ್ಯಗಳಲ್ಲಿ 22 ಪಾಯಿಂಟ್‌ಗಳೊಂದಿಗೆ ಐದನೇ ಸ್ಥಾನದಲ್ಲೇ ಉಳಿಯಿತು.

ನಾಯಕ ಸುನಿಲ್ ಚೆಟ್ರಿಗೆ ವಿಶ್ರಾಂತಿ ನೀಡಿ ಅಂತರರಾಷ್ಟ್ರೀಯ ಆಟಗಾರ ಆಶಿಕ್ ಕುರುಣಿಯನ್ ಅವರನ್ನು ಕಣಕ್ಕೆ ಇಳಿಸಿದ ಬಿಎಫ್‌ಸಿ ಎದುರಾಳಿಗಳನ್ನು ತವರಿನಲ್ಲಿ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.

ಆರಂಭದಲ್ಲಿ ಎರಡೂ ತಂಡಗಳು ರಕ್ಷಣೆಗೆ ಒತ್ತು ನೀಡಿದವು. ಬಿಎಫ್‌ಸಿ ಕ್ರಮೇಣ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಆದರೆ ಚೆಂಡನ್ನು ಗುರಿ ಮುಟ್ಟಿಸುವ ಪ್ರಯತ್ನಕ್ಕೆ ಫಲ ಸಿಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.