ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಕೆಗೆ ಸತತ ಎರಡನೇ ಗೆಲುವು

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಚೆನ್ನೈಯಿನ್‌ಗೆ ತವರಿನಲ್ಲಿ ಮತ್ತೆ ನಿರಾಸೆ
Last Updated 30 ಅಕ್ಟೋಬರ್ 2019, 20:11 IST
ಅಕ್ಷರ ಗಾತ್ರ

ಚೆನ್ನೈ : ಕೋಲ್ಕತ್ತದ ಎಟಿಕೆ ತಂಡದ ಡೇವಿಡ್‌ ವಿಲಿಯಮ್ಸ್‌ ಐಎಸ್‌ಎಲ್‌ ಟೂರ್ನಿಯ ಒಂದು ಸಾವಿರನೇ ಗೋಲು ದಾಖಲಿಸಿದರು. ಇಲ್ಲಿನ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಬುಧವಾರ ಚೆನ್ನೈಯಿನ್‌ ಎಫ್‌.ಸಿ. ವಿರುದ್ಧ ನಡೆದ ಆರನೇ ಆವೃತ್ತಿಯ ಲೀಗ್‌ ಪಂದ್ಯದಲ್ಲಿ ಅವರ ಈ ಗೋಲು ಕೋಲ್ಕತ್ತ ತಂಡದ ಪಾಲಿಗೆ ವಿಜಯದ ಗೋಲು ಕೂಡ ಆಯಿತು.

ಕೋಲ್ಕತ್ತದ ತಂಡ 1–0 ಗೋಲಿ ನಿಂದ ಈ ಪಂದ್ಯ ಗೆದ್ದುಕೊಂಡಿತು. ಈ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಜಯ ದಾಖಲಿಸಿತು. ವಿರಾಮದವರೆಗಿನ ಆಟದಲ್ಲಿ ಎರಡೂ ತಂಡಗಳು ಗೋಲು ಗಳಿಸಲು ವಿಫಲ ವಾಗಿದ್ದವು. ಆದರೆ ಉತ್ತರಾರ್ಧದ ಮೂರನೇ ನಿಮಿಷವೇ ಕೋಲ್ಕತ್ತ ತಂಡ ನಿರ್ಣಾಯಕ ಗೋಲು ಗಳಿಸಿತು.

48ನೇ ನಿಮಿಷ, ಪ್ರಬೀರ್ ದಾಸ್‌ ಗೋಲಿನ ಬಲಭಾಗದಿಂದ ‌ಪಾಸ್‌ ಮಾಡಿದ ಚೆಂಡನ್ನು ಜೇವಿಯರ್‌ ಹರ್ನಾಂಡೆಝ್‌ ಗೋಲಿನತ್ತ ಒದ್ದರು. ಅವರ ಈ ಯತ್ನವನ್ನು ಸರಿಯಾಗಿ ತಡೆಯುವಲ್ಲಿ ರಕ್ಷಣೆ ಆಟಗಾರ ಗೋಯಿಯನ್‌ ವಿಫಲರಾದರು.

ಈ ಲೋಪದ ಲಾಭ ಪಡೆದ ವಿಲಿಯಮ್ಸ್‌ ಗೋಲಿನ ಬಳಿಯಲ್ಲೇ ದೊರೆತ ಸುವರ್ಣಾವಕಾಶ ವ್ಯರ್ಥ ಮಾಡದೇ ಚೆಂಡನ್ನು ಗುರಿತಲುಪಿ
ಸಿದರು. ‌ಎಟಿಕೆ ಇದಕ್ಕೆ ಮೊದಲೂ ಅವಕಾಶ ಪಡೆದಿತ್ತು. ಆದರೆ ದುರದೃಷ್ಟವಶಾತ್‌ ತೀರ್ಪುಗಳು ಅದಕ್ಕೆ ವಿರುದ್ಧವಾದವು. ಪೂರ್ವಾರ್ಧದ 19ನೇ ನಿಮಿಷ ‘ಪೆನಾಲ್ಟಿ’ ನೀಡುವಂತೆ ಮಾಡಿದ ಮನವಿಯನ್ನು ರೆಫ್ರಿ ಪುರಸ್ಕರಿ ಸಲಿಲ್ಲ. ಟಿ.ವಿ. ರಿಪ್ಲೇಗಳಲ್ಲಿ ರಾಯ್‌ ಕೃಷ್ಣ ವಿರುದ್ಧ ಎದುರಾಳಿ ಆಟಗಾರನೊಬ್ಬ ಒರಟಾಗಿ ತಡೆದಿದ್ದು ಸ್ಪಷ್ಟವಾಗಿ ಕಂಡಿತು.

ಮರುನಿಮಿಷವೇ ಮತ್ತೊಂದು ತೀರ್ಪು ಕೂಡ ಎಟಿಕೆ ವಿರುದ್ಧವೇ ಹೋಯಿತು.ಡೇವಿಡ್‌ ವಿಲಿಯಮ್ಸ್‌ ಅವರ ಅಮೋಘ ಯತ್ನದಲ್ಲಿ ಚೆಂಡನ್ನು ಗುರಿತಲುಪಿಸಿದ್ದರು. ಆದರೆ ಲೈನ್ಸ್‌ಮನ್‌ಗಳು ಫ್ಲ್ಯಾಗ್‌ ತೋರಿಸಿ ಆಫ್‌ಸೈಡ್‌ ಸೂಚನೆ ನೀಡಿದರು.
ಮರುಪ್ರಸಾರದಲ್ಲಿ ಗೋಲಿಗಾಗಿ ಓಡುವಾಗ ಆನ್‌ಸೈಡ್‌ನಲ್ಲಿರುವುದು ಸ್ಪಷ್ಟವಾಗಿತ್ತು.ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ಕೆಲವು ಉತ್ತಮ ಅವಕಾಶಗ ಳನ್ನು ಗೋಲಾಗಿ ಪರಿವರ್ತಿಸಲು ವಿಫಲವಾಯಿತು. 43ನೇ ನಿಮಿಷ ಬಾಕ್ಸ್‌ ಸಮೀಪದಿಂದ ದೊರೆತ ಫ್ರೀ ಕಿಕ್‌ ಅವಕಾಶವನ್ನು ಎಟಿಕೆ ಗೋಲ್‌ಕೀಪರ್‌ ಸುಲಭವಾಗಿ ತಡೆದರು.‌ ಎಡ್ವಿನ್‌ ಸಿಡ್ನಿ ವಾನ್ಸ್‌ಪೌಲ್‌ 65ನೇ ನಿಮಿಷ ದೊರೆತ ಉತ್ತಮ ಅವಕಾಶದಲ್ಲಿ ಗೋಲಿನತ್ತ ಚೆಂಡನ್ನು ಬಲವಾಗಿ ಒದ್ದರು. ಈ ಯತ್ನದಲ್ಲಿ ಚೆಂಡನ್ನುತಡೆಯಲು ಗೋಲ್‌ಕೀಪರ್ ವಿಫಲರಾದರೂ, ಗೋಲ್‌ಪೋಸ್ಟ್‌ನ ಸ್ವಲ್ಪ ಆಚೆಯಿಂದ ಹೊರಹೋಯಿತು. ಮರು ನಿಮಿಷ ಇನ್ನೊಂದು ಅವಕಾಶದಲ್ಲಿ ಆಂಡ್ರೆ ಷೆಂಬ್ರಿ ಅವರ ಯತ್ನದಲ್ಲಿ ಕೂಡ ಚೆಂಡು ಸ್ವಲದರಲ್ಲೇ ಗುರಿತಪ್ಪಿತು.

ಆತಿಥೇಯರು ಸತತ ಯತ್ನಗಳನ್ನು ನಡೆಸಿದರೂ ಯಶಸ್ವಿಯಾಗಲಿಲ್ಲ. ಕೆಲ ನಿಮಿಷಗಳ ನಂತರ ಫ್ರೀಕಿಕ್‌ ಅವಕಾಶದಲ್ಲಿ ರಫೆಲ್‌ ಕ್ರಿವೆಲ್ಲಾರೊ ಎಡವಿದರು. ಅವರ ಯತ್ನದಲ್ಲಿ ಚೆಂಡು ಅಡ್ಡಪಟ್ಟಿಯ ಸಾಕಷ್ಟು ಮೇಲಿಂದ ಹೋಯಿತು. ಎಟಿಕೆ ತಂಡ ಉತ್ತರಾರ್ಧದಲ್ಲಿ ಮೂರು ಬದಲಾವಣೆಗಳನ್ನು ಮಾಡಿತು.

ಇಂದಿನ ಪಂದ್ಯ

ಮುಂಬೈ ಸಿಟಿ– ಒಡಿಶಾ ಎಫ್‌ಸಿ

ಮುಂಬೈ ಫುಟ್‌ಬಾಲ್‌ ಅರೇನಾ

ರಾತ್ರಿ 7.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT