ಬ್ಯಾಂಬೊಲಿಮ್: ಗೆಲುವಿನ ಹಳಿಗೆ ಮರಳುವ ಹಂಬಲದಲ್ಲಿರುವ ಎರಡು ಬಾರಿಯ ಚಾಂಪಿಯನ್ ಚೆನ್ನೈಯಿನ್ ಎಫ್‌ಸಿ ತಂಡವುಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಸೋಮವಾರ ಹೈದರಾಬಾದ್ ಎಫ್‌ಸಿಯನ್ನು ಎದುರಿಸಲಿದೆ. ಈ ಹಣಾಹಣಿಗೆ ಜಿಎಂಸಿ ಕ್ರೀಡಾಂಗಣ ಸಜ್ಜಾಗಿದೆ.

ಪಾಯಿಂಟ್ಸ್ ಪಟ್ಟಿಯಲ್ಲಿ ಸದ್ಯ ಏಳನೇ ಸ್ಥಾನದಲ್ಲಿರುವ ಚೆನ್ನೈಯಿನ್ ತಾನಾಡಿದ ಈ ಹಿಂದಿನ ಎರಡು ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಪಟ್ಟಿಯಲ್ಲಿ ಹೈದರಾಬಾದ್ ಎಂಟನೇ ಸ್ಥಾನದಲ್ಲಿದೆ.

ಪಂದ್ಯದ ಕೊನೆಯ ಹಂತದಲ್ಲಿ ಗೋಲುಗಳನ್ನು ಬಿಟ್ಟುಕೊಡುವ ದೌರ್ಬಲ್ಯಕ್ಕೆ ಚೆನ್ನೈಯಿನ್ ಬೆಲೆ ತೆತ್ತಿದೆ. ಟೂರ್ನಿಯಲ್ಲಿ ಇದುವರೆಗೆ ಎರಡು ಗೆಲುವು, ಎರಡು ಸೋಲು ಹಾಗೂ ನಾಲ್ಕು ಪಂದ್ಯಗಳಲ್ಲಿ ತಂಡವು ಡ್ರಾ ಸಾಧಿಸಿದ್ದು, ಕೋಚ್ ಸಾಬಾ ಲಾಜಲೊ ಅವರಿಗೆ ಸಮಾಧಾನ ತಂದಿಲ್ಲ.

‘ತಂಡದ ಸಾಮರ್ಥ್ಯ ಸುಧಾರಣೆಗೆ ಪ್ರಯತ್ನಿಸುತ್ತಿದ್ದೇವೆ. ಇಲ್ಲಿಯವರೆಗೆ ಏಳು ಗೋಲುಗಳನ್ನು ಎದುರಾಳಿಗಳಿಗೆ ಬಿಟ್ಟುಕೊಟ್ಟಿದ್ದೇವೆ. ಅದರಲ್ಲಿ ಐದು ಗೋಲು ಸೆಟ್ ಪೀಸ್ ಮೂಲಕ ಬಂದಿವೆ. ಕಳೆದ ಪಂದ್ಯದಲ್ಲಿ ಉತ್ತಮ ಆಟವಾಡಿದ್ದು, ಅದೇ ರೀತಿಯ ಸಾಮರ್ಥ್ಯ ಮುಂದುವರಿಸಬೇಕಾಗಿದೆ‘ ಎಂದು ಲಾಜಲೊ ಹೇಳಿದ್ದಾರೆ.

ಟೂರ್ನಿಯಲ್ಲಿ ಉತ್ತಮ ಆರಂಭ ಮಾಡಿದ್ದ ಹೈದರಾಬಾದ್ ಬಳಿಕ ಮೊನಚು ಕಳೆದುಕೊಂಡಿದೆ. ಈಸ್ಟ್ ಬೆಂಗಾಲ್ ಮತ್ತು ಒಡಿಶಾ ಎಫ್‌ಸಿ ವಿರುದ್ಧದ ಗೆಲುವುಗಳ ನಂತರ ಬೆಂಗಳೂರು ಎಫ್‌ಸಿ ಹಾಗೂ ಎಟಿಕೆಎಂಬಿ ಜೊತೆ ಡ್ರಾ ಸಾಧಿಸಿತ್ತು.

ಸದ್ಯ ಮತ್ತೊಂದು ಗೆಲುವಿನ ಹುಡುಕಾಟದಲ್ಲಿ ಆ ತಂಡವಿದೆ.

ಪಂದ್ಯ ಆರಂಭ: ಸಂಜೆ 7.30

ಸ್ಥಳ: ಜಿಎಂಸಿ ಕ್ರೀಡಾಂಗಣ, ಬ್ಯಾಂಬೊಲಿಮ್

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.