ಸೋಮವಾರ, ಜುಲೈ 4, 2022
21 °C
ತವರಿನಂಗಳದಲ್ಲಿ ಮುಂಬೈಗೆ ನಿರಾಶೆ

ಐಎಸ್‌ಎಲ್: ಜೆಮ್‌ಶೆಡ್‌ಪುರ ಆಟಕ್ಕೆ ಒಲಿದ ಜಯ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಜೆಮ್‌ಶೆಡ್‌ಪುರ ಫುಟ್‌ಬಾಲ್ ಕ್ಲಬ್ (ಜೆಎಫ್ ಸಿ)ತಂಡವು ಮಂಗಳವಾರ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಗೆದ್ದಿತು.

ಕಿಕ್ಕಿರಿದು ಸೇರಿದ್ದ ಫುಟ್‌ಬಾಲ್ ಪ್ರೇಮಿಗಳ  ಎದುರು ನಡೆದ ಪಂದ್ಯದಲ್ಲಿ ಜೆಎಫ್ ಸಿ ತಂಡವು 2–0 ಗೋಲುಗಳಿಂದ ಮುಂಬೈ ಸಿಟಿ ತಂಡವನ್ನು ಸೋಲಿಸಿತು.

 ತಂಡದ ಮಾರಿಯೊ ಅರ್ಕ್ಯುಸ್ (28ನೇ ನಿ) ಮತ್ತು ಪ್ಯಾಬ್ಲೊ ಮಾರ್ಗಾಡೊ ಬ್ಲ್ಯಾಂಕೊ (90+5ನೇ ನಿ)  ಗೋಲು ಗಳಿಸಿದರು.

 4–2–3–1 ಸಂಯೋಜನೆಯೊಂದಿಗೆ ಕಣಕ್ಕಿಳಿದ ಜೆಎಫ್‌ಸಿ ತಂಡವು ಆರಂಭದಿಂದಲೇ ಚುರುಕಾದ ಆಟವಾಡಿತು.

ತವರಿನ ಅಂಗಳದಲ್ಲಿ ಮುಂಬೈ ತಂಡವು ಮುನ್ನಢೆ ಕಂಡುಕೊಳ್ಳಬಹುದು ಎಂಬ ನಿರೀಕ್ಷೆ ಸುಳ್ಳಾಯಿತು. ಆದರೆ  ಜೆಎಫ್ ಸಿ  ಆರಂಭದಲ್ಲೇ ಖಾತೆ ತೆರೆದು ಪಂದ್ಯದ ಮೇಲೆ ಹಿಡಿತ ಸಾಧಿಸಿತು.

28ನೇ ನಿಮಿಷದಲ್ಲಿ ಮಾರಿಯೋ ಆರ್ಕ್‌ವೀಸ್ ಗಳಿಸಿದ ಗೋಲಿನಿಂದ ಟಾಟಾ ಪಡೆ ಯಶಸ್ಸು ಕಂಡಿತು. ಮುಂಬೈ ತಂಡ ಬಹಳ ರಕ್ಷಣಾತ್ಮಕವಾಗಿ ಆಟವಾಡಿತು. ಆದರೆ ಆಕ್ರಮಣಕಾರಿ ಆಟ ತೋರಿದ ತಂಡ ಯಶಸ್ಸು ಕಂಡಿತು. ಇದರಿಂದಾಗಿ ಮೊದಲರ್ಧದ ವಿರಾಮಕ್ಕೆ 1–0 ಮುನ್ನಡೆ ಗಳಿಸಿತು.

ಚುಟುಕಾದ ಮತ್ತು ಚುರುಕಾದ ಪಾಸ್‌ಗಳ ಮೂಲಕ ಎದುರಾಳಿಗಳ ಮೇಲೆ ಒತ್ತಡ ಹೇರಿದ ಜೆಎಫ್‌ಸಿ ಆಟಗಾರರು ದ್ವಿತೀಯಾರ್ಧದದಲ್ಲಿಯೂ ಮೇಲುಗೈ ಸಾಧಿಸಿದರು. ಆದರೆ ಗೋಲು ಗಳಿಸಲಿಲ್ಲ. ಮುಂಬೈ ತಂಡಕ್ಕೆ ಗಳಿಸಲೂ ಬಿಡಲಿಲ್ಲ.  ಆದರೆ ಹೆಚ್ಚುವರಿ ಅವಧಿಯ ಐದನೇ ನಿಮಿಷದಲ್ಲಿ ಮಾರ್ಗಾಡೊ ಗೋಲು ಹೊಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು