ಬಿಎಫ್‌ಸಿ ಕೊನೆಯ ಲೀಗ್ ಪಂದ್ಯ ನಾಳೆ

ಬೆಂಗಳೂರು: ಪ್ಲೇ ಆಫ್‌ನಲ್ಲಿ ಸ್ಥಾನ ಭದ್ರಪಡಿಸಿಕೊಂಡಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಬುಧವಾರ ಕಣಕ್ಕೆ ಇಳಿಯಲಿದೆ.
ಜೆಮ್‌ಶೆಡ್‌ಪುರದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಿಎಫ್‌ಸಿ ತಂಡ ಜೆಮ್‌ಶೆಡ್‌ಪುರ ಎಫ್‌ಸಿ (ಜೆಎಫ್‌ಸಿ) ಎದುರು ಸೆಣಸಲಿದೆ. ಐದನೇ ಸ್ಥಾನದಲ್ಲಿರುವ ಜೆಎಫ್‌ಸಿ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ.
ಆದ್ದರಿಂದ ಕೊನೆಯ ಪಂದ್ಯದಲ್ಲಿ ಗೆದ್ದು ಗೌರವ ಉಳಿಸಿಕೊಳ್ಳಲು ಪ್ರಯತ್ನಿಸಲಿದೆ.
ಅಗ್ರಸ್ಥಾನದಲ್ಲೇ ಉಳಿಯಬೇಕಾದರೆ ಬಿಎಫ್‌ಸಿಗೂ ಗೆಲುವು ಅಗತ್ಯ. ಎರಡನೇ ಸ್ಥಾನದಲ್ಲಿರುವ ಎಫ್‌ಸಿ ಗೋವಾ ತಂಡಕ್ಕೂ ಇನ್ನು ಒಂದು ಪಂದ್ಯ ಬಾಕಿ ಇದೆ.
ತಂಡದ ಖಾತೆಯಲ್ಲಿ ಈಗ 31 ಪಾಯಿಂಟ್‌ಗಳಿವೆ. ಬಿಎಫ್‌ಸಿ ಖಾತೆಯಲ್ಲಿ 34 ಪಾಯಿಂಟ್‌ಗಳಿವೆ. ಬುಧವಾರ ಬಿಎಫ್‌ಸಿ ಸೋತು, ಗುರುವಾರದ ಪಂದ್ಯದಲ್ಲಿ ಗೋವಾ ಗೆದ್ದರೆ ಗೋಲು ಗಳಿಕೆಯ ಆಧಾರದಲ್ಲಿ ಆ ತಂಡ ಅಗ್ರ ಸ್ಥಾನಕ್ಕೆ ಏರಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.