ಭಾನುವಾರ, ಮೇ 29, 2022
30 °C

ಐಎಸ್‌ಎಲ್‌: ಜೆಎಫ್‌ಸಿ–ಮುಂಬೈ ಪಂದ್ಯ ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಶುಕ್ರವಾರ ನಡೆಯಬೇಕಾಗಿದ್ದ ಪಂದ್ಯವನ್ನು ಮುಂದೂಡಲಾಗಿದೆ. ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ಜೆಮ್ಶೆಡ್‌ಪುರ ಎಫ್‌ಸಿ ಮತ್ತು ಮುಂಬೈ ಸಿಟಿ ಎಫ್‌ಸಿ ನಡುವೆ ಹಣಾಹಣಿ ನಡೆಯಬೇಕಾಗಿತ್ತು.

ಆದರೆ ಪಂದ್ಯವನ್ನು ಮುಂದೂಡ ಲಾಗಿದೆ ಎಂದು ಗುರುವಾರ ಸಂಜೆ ಆಯೋಜಕರು ತಿಳಿಸಿದ್ದಾರೆ. ವಾಸ್ಕೋದ ತಿಲಕ್ ಮೈದಾನ್ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆಯಬೇಕಾಗಿದ್ದ ಕೇರಳ ಬ್ಲಾಸ್ಟರ್ಸ್‌ ಎಫ್‌ಸಿ ಮತ್ತು ಎಟಿಕೆ ಮೋಹನ್ ಬಾಗನ್ ನಡುವಿನ ಪಂದ್ಯವನ್ನು ಕೂಡ ಮುಂದೂ ಡಲಾಗಿದೆ. ಎಟಿಕೆ ಮೋಹನ್ ಬಾಗನ್ ತಂಡದ ನಾಲ್ವರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ಕಾರಣ ಕಳೆದ ವಾರದಿಂದ ಕೆಲವು ಪಂದ್ಯಗಳನ್ನು ಮುಂದೂಡಲಾಗುತ್ತಿದೆ. ಕಳೆದ ಶನಿವಾರದಿಂದ ಸೋಮವಾರದ ವರೆಗೆ ಸತತ ಮೂರು ದಿನ ಪಂದ್ಯಗ ಳನ್ನು ಮುಂದೂಡಲಾಗಿತ್ತು. ಈ ವರೆಗೆ ಒಟ್ಟು ಆರು ಪಂದ್ಯಗಳನ್ನು ಮುಂದೂಡಿದಂತಾಗಿದೆ.

ಮೂರು ತಂಡಗಳು ಈ ವರೆಗೆ ತಲಾ 12 ಪಂದ್ಯಗಳನ್ನು ಆಡಿದ್ದು ಏಳು ತಂಡಗಳು 11 ತಲಾ 11 ಪಂದ್ಯ ಆಡಿವೆ. ಎಟಿಕೆ ಮೋಹನ್ ಬಾಗನ್‌ಗೆ ಒಂಬತ್ತು ಪಂದ್ಯಗಳನ್ನಷ್ಟೇ ಆಡಲು ಸಾಧ್ಯವಾಗಿದೆ.

ತಲಾ ಐದು ಜಯ ಮತ್ತು ಐದು ಡ್ರಾದೊಂದಿಗೆ 20 ಪಾಯಿಂಟ್ ಗಳಿಸಿ ರುವ ಕೇರಳ ಬ್ಲಾಸ್ಟರ್ಸ್ ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನದಲ್ಲಿದ್ದು 19 ಪಾಯಿಂಟ್‌ಗಳೊಂದಿಗೆ ಜೆಮ್ಶೆಡ್‌ಪುರ ಎಫ್‌ಸಿ ಎರಡನೇ ಸ್ಥಾನದಲ್ಲಿದೆ. ಹೈದರಾ ಬಾದ್ ಎಫ್‌ಸಿ ಮತ್ತು ಮುಂಬೈ ಸಿಟಿ ಎಫ್‌ಸಿ ತಂಡಗಳು ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನ ಗಳಿಸಿವೆ.

ಬೆಂಗಳೂರು ಎಫ್‌ಸಿ 11 ಪಂದ್ಯಗಳಲ್ಲಿ ಮೂರು ಜಯ, ತಲಾ ನಾಲ್ಕು ಡ್ರಾ ಮತ್ತು ಸೋಲಿನೊಂದಿಗೆ 13 ಪಾಯಿಂಟ್ ಗಳಿಸಿ ಎಂಟನೇ ಸ್ಥಾನದಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು