ಐಎಸ್‌ಎಲ್‌ 25ರಿಂದ ಪುನರಾರಂಭ

7

ಐಎಸ್‌ಎಲ್‌ 25ರಿಂದ ಪುನರಾರಂಭ

Published:
Updated:
Prajavani

ಬೆಂಗಳೂರು: ಎಎಫ್‌ಸಿ ಏಷ್ಯಾಕಪ್ ಫುಟ್‌ಬಾಲ್ ಟೂರ್ನಿಗಾಗಿ ಸ್ಥಗಿತಗೊಳಿಸಲಾಗಿದ್ದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯಗಳು ಇದೇ ತಿಂಗಳ 25ರಿಂದ ಮತ್ತೆ ಆರಂಭವಾಗಲಿವೆ. 

ಎರಡನೇ ಹಂತದಲ್ಲಿ ಒಟ್ಟು 31 ಪಂದ್ಯಗಳು ನಡೆಯಲಿವೆ. ಅಜೇಯವಾಗಿ ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನವನ್ನು ಅಲಂಕರಿಸಿರುವ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ಏಳು ಪಂದ್ಯಗಳನ್ನು ಆಡಲಿದೆ. ಈ ಪೈಕಿ ಮೂರು ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ.

ಎರಡನೇ ಹಂತದ ಮೊದಲ ಪಂದ್ಯ 25ರಂದು ಕೊಚ್ಚಿಯಲ್ಲಿ ನಡೆಯಲಿದೆ. ಕೇರಳ ಬ್ಲಾಸ್ಟರ್ಸ್ ಮತ್ತು ಎಟಿಕೆ ತಂಡಗಳು ಸೆಣಸಲಿವೆ. ಮಾರ್ಚ್ ಮೂರರಂದು ಕೊನೆಯ ಲೀಗ್ ಪಂದ್ಯ ನಡೆಯಲಿದ್ದು ಎಟಿಕೆ ಮತ್ತು ಡೆಲ್ಲಿ ಡೈನಾಮೋಸ್ ತಂಡಗಳು ಈ ಪಂದ್ಯದಲ್ಲಿ ಆಡಲಿವೆ.

ಕಳೆದ ಬಾರಿಯ ರನ್ನರ್ ಅಪ್ ಬಿಎಫ್‌ಸಿ 11 ಪಂದ್ಯಗಳಲ್ಲಿ 27 ಪಾಯಿಂಟ್ ಗಳಿಸಿದ್ದು ಮುಂಬೈ ಸಿಟಿ 12 ಪಂದ್ಯಗಳಿಂದ 24 ಪಾಯಿಂಟ್ ಕಲೆ ಹಾಕಿ ಎರಡನೇ ಸ್ಥಾನದಲ್ಲಿದೆ. ಎಫ್‌ಸಿ ಗೋವಾ ಮತ್ತು ನಾರ್ತ್ ಈಸ್ಟ್ ಯುನೈಟೆಡ್‌ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. 

ಏಷ್ಯಾ ಕಪ್‌ ಟೂರ್ನಿಗಾಗಿ ಡಿಸೆಂಬರ್ 16ರಂದು ಐಎಸ್‌ಎಲ್‌ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಭಾರತ ತಂಡ ಏಷ್ಯಾ ಕಪ್‌ನ ಗುಂಪು ಹಂತದಿಂದಲೇ ಹೊರಬಿದ್ದು ವಾಪಸಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !