ಗುರುವಾರ , ಡಿಸೆಂಬರ್ 8, 2022
18 °C
‘ಇ’ ಗುಂಪಿನ ಪಂದ್ಯದಲ್ಲಿ ರಿತ್ಸು, ಟಕುಮಾ ಕಾಲ್ಚಳಕ

ಜಪಾನ್‌ಗೆ ಜಯ; ಜರ್ಮನಿಗೆ ಆಘಾತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೋಹಾ (ಎಎಫ್‌ಪಿ): ರಿತ್ಸು ಡೊನ್ ಹಾಗೂ ಟಕುಮಾ ಅಸಾನೊ ಅವರ ಕಾಲ್ಚಳಕದಿಂದಾಗಿ ಜಪಾನ್ ತಂಡವು  ನಾಲ್ಕು ಬಾರಿಯ ಚಾಂಪಿಯನ್ ಜರ್ಮನಿ ತಂಡಕ್ಕೆ  ಆಘಾತ ನೀಡಿತು.  

ಫಿಫಾ ವಿಶ್ವಕಪ್ ಟೂರ್ನಿಯ ಇ ಗುಂಪಿನ ಮೊದಲ ಪಂದ್ಯದಲ್ಲಿಯೇ ಜಪಾನ್ ತಂಡವು 2–1ರಿಂದ ಜರ್ಮನಿಯ ವಿರುದ್ಧ ರೋಚಕ ಜಯ ದಾಖಲಿಸಿತು. 

ಮೊದಲಾರ್ಧದಲ್ಲಿ 1–0 ಮುನ್ನಡೆಯೊಂದಿಗೆ ಜರ್ಮನಿ ಪಾರಮ್ಯ ಮೆರೆಯಿತು. 33ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿಯಲ್ಲಿ ಜರ್ಮನಿಯ ಲಿಕಾಯ್ ಗುಂಡೊಗನ್ ಗೋಲು ಹೊಡೆದರು. ವಿರಾಮದ ನಂತರವೂ ಜರ್ಮನಿ ತಂಡವು ಬಿಗಿಹಿಡಿತ ಸಾಧಿಸಿತ್ತು. 

ಆದರೆ, 75ನೇ ನಿಮಿಷದಲ್ಲಿ ಜಪಾನ್ ತಂಡದ ರಿತ್ಸು ಡೊನ್  ಜರ್ಮನಿಯ ರಕ್ಷಣಾ ಕೋಟೆಯನ್ನು ದಾಟಿ ಗೋಲು ಗಳಿಸಿದರು. ಇದರಿಂದಾಗಿ ಸಮಬಲವಾಯಿತು.  83ನೇ ನಿಮಿಷದಲ್ಲಿ ಟಕುಮಾ ಅಸಾನೊ ಮಿಂಚಿನ ವೇಗದಲ್ಲಿ ಗೋಲು ಗಳಿಸುವ ಮೂಲಕ ಜಪಾನ್ ತಂಡಕ್ಕೆ ಗೆಲುವಿನ ಮುದ್ರೆಯೊತ್ತಿದರು. ಜರ್ಮನಿ ಆಟಗಾರರು ದಂಗಾಗಿಹೋದರು. ಜಪಾನಿ ಆಟಗಾರರ ರಕ್ಷಣಾ ತಂತ್ರವೂ ಅಮೋಘವಾಗಿತ್ತು. ಪದೇ ಪದೇ ದಾಳಿ ಮಾಡಿದ ಜರ್ಮನಿ ಆಟಗಾರರಿಗೆ ತಡೆಯೊಡ್ಡುವಲ್ಲಿ ಸಫಲರಾದರು. 

2018ರ ವಿಶ್ವಕಪ್ ಟೂರ್ನಿಯಲ್ಲಿ  ಗುಂಪು ಹಂತದಲ್ಲಿಯೇ ನಿರ್ಗಮನಿಸಿತ್ತು. 

ಪ್ರತಿಭಟನೆ: ಟೂರ್ನಿಯಲ್ಲಿ ತ್ರಿವರ್ಣದ ಆರ್ಮ್‌ಬ್ಯಾಂಡ್ ಧರಿಸುವುದನ್ನು ನಿಷೇಧ ಮಾಡಿರುವುದರ ವಿರುದ್ಧ ಜರ್ಮನಿ ತಂಡವು ಪ್ರತಿಭಟನೆ ವ್ಯಕ್ತಪಡಿಸಿತು. ಪಂದ್ಯದ ಆರಂಭಕ್ಕೂ ಮುನ್ನ ತಂಡದ ಗುಂಪು ಚಿತ್ರ ತೆಗೆಸಿಕೊಳ್ಳುವಾಗ ಜರ್ಮನಿ ಆಟಗಾರರು ಬಾಯಿಯನ್ನು ಮುಚ್ಚಿಕೊಳ್ಳುವ ಮೂಲಕ ಪ್ರತಿಭಟಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು