ಬೆಳಗಾವಿಯ ಸ್ಪೋರ್ಟಿಂಗ್ ಪ್ಲಾನೆಟ್ ಲವ್‌ಡೇಲ್ ಶಾಲೆಯ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ 1–3ರ ಅಂತರದಲ್ಲಿ ರಾಜಸ್ತಾನ ತಂಡದ ವಿರುದ್ಧ ಸೋಲನುಭವಿಸಿತು. ರಾಜಸ್ತಾನದ ಪರ ಮಂಜು ಕನ್ವರ್ (23ನೇ ನಿಮಿಷ), ಸಂಜು ಕನ್ವರ್ (36ನೇ ಮತ್ತು 63ನೇ ನಿಮಿಷ) ಗೋಲು ದಾಖಲಿಸಿದರು. ಕರ್ನಾಟಕದ ಪರ ರುತುಶ್ರೀ ನಂದನ್ 52ನೇ ನಿಮಿಷದಲ್ಲಿ ಏಕೈಕ ಗೋಲು ದಾಖಲಿಸಿದರು.