ನವದೆಹಲಿ: ಮಾಜಿ ಅಂತರರಾಷ್ಟ್ರೀಯ ಆಟಗಾರ ಖಾಲಿದ್ ಜಮೀಲ್ ಅವರು 13 ವರ್ಷಗಳ ನಂತರ ಭಾರತ ಫುಟ್ಬಾಲ್ ತಂಡಕ್ಕೆ ತರಬೇತುದಾರನಾದ ಮೊದಲ ಭಾರತೀಯ ಎನಿಸಿದರು. ಅವರು ಸ್ಟೀಫನ್ ಕಾನ್ಸ್ಟಂಟೇನ್ ಮತ್ತು ಸ್ಟೆಫಾನ್ ಟರ್ಕೊವಿಕ್ ಅವರ ಪೈಪೋಟಿ ಮೀರಿನಿಂತರು.

ಸಾವಿಯೊ ಮೆದೀರಾ ಅವರು ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ ಭಾರತದ ಕೊನೆಯ ಕೋಚ್ ಆಗಿದ್ದಾರೆ. ಅವರು 2011–12ನೇ ಸಾಲಿಗೆ ಕೋಚ್ ಆಗಿದ್ದರು. ಈಗ ಜಮೀಲ್ ಮೇಲೆ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಭರವಸೆ ಇಟ್ಟಿದೆ.

ಅಷ್ಟೇನೂ ಪರಿಚಿತವಲ್ಲದ ಐಜ್ವಾಲ್ ಫುಟ್ಬಾಲ್ ಕ್ಲಬ್ ತಂಡವನ್ನು 2017ರಲ್ಲಿ ಜಮೀಲ್ ಅವರು ಚಾಂಪಿಯನ್ ಆಗಿ ರೂಪಿಸಿದ್ದರು. ಕೆಲಸಮಯದಿಂದ ಪರದಾಡುತ್ತಿರುವ ಭಾರತ ತಂಡಕ್ಕೆ ಚೈತನ್ಯ ನೀಡಬೇಕಾದ ಸವಾಲು ಈಗ 48 ವರ್ಷ ವಯಸ್ಸಿನ ಜಮೀಲ್ ಮುಂದಿದೆ.

ಜಮೀಲ್ ಈಗ ಐಎಸ್ಎಲ್ನಲ್ಲಿ ಜೆಮ್ಷೆಡ್ಪುರ ಎಫ್ಸಿ ತಂಡದ ಕೋಚಿಂಗ್ ಹೊಣೆ ಹೊತ್ತಿದ್ದಾರೆ.

ಈ ಹುದ್ದೆಯ ರೇಸ್ನಲ್ಲಿದ್ದ ಕಾನ್ಸ್ಟಂಟೇನ್ ಅವರು ಈ ಹಿಂದೆಯೂ ಭಾರತ ತಂಡದ ಹೆಡ್ ಕೋಚ್ ಆಗಿದ್ದರು. ಟರ್ಕೊವಿಕ್ ಅವರು ಸ್ಲೊವಾಕಿಯಾ ರಾಷ್ಟ್ರೀಯ ತಂಡದ ಕೋಚಿಂಗ್ ಹೊಣೆ ಹೊತ್ತಿದ್ದರು. ಮಾಜಿ ಫುಟ್ಬಾಲ್ ತಾರೆ ಐ.ಎಂ.ವಿಜಯನ್ ನೇತೃತ್ವದ ಎಐಎಫ್ಎಫ್ ತಾಂತ್ರಿಕ ಸಮಿತಿ ಮೂವರು ಹೆಸರನ್ನು ಶಾರ್ಟ್ಲಿಸ್ಟ್ ಮಾಡಿತ್ತು.

ಮನೊಲೊ ಮಾರ್ಕ್ವೆಝ್ ಅವರು ಈವರೆಗೆ ತಂಡದ ಹೆಡ್ ಕೋಚ್ ಆಗಿದ್ದರು. ಕಳೆದ ತಿಂಗಳು ಅವರು ಎಐಎಫ್ಎಫ್ ಸಮ್ಮತಿಯೊಡನೆ ಈ ಹುದ್ದೆ ತೊರೆದಿದ್ದರು. ತಂಡ ಅವರ ಅವಧಿಯಲ್ಲಿ ನಿರೀಕ್ಷಿತ ಮಟ್ಟ ತಲುಪಿರಲಿಲ್ಲ.

‘ಫೆಡರೇಷನ್ನ ಕಾರ್ಯಕಾರಿ ಸಮಿತಿ ನೂತನ ಕೋಚ್ ಆಗಿ ಜಮೀಲ್ ಅವರನ್ನು ನೇಮಕ ಮಾಡಿದೆ. ಆದರೆ ಅವರ ಅವಧಿ ಇನ್ನೂ ನಿಗದಿಪಡಿಸಿಲ್ಲ. ಅವರ ಜೊತೆ ಮತ್ತು ನಮ್ಮಲ್ಲಿ ಮಾತನಾಡಿಕೊಂಡು ನಿರ್ಧರಿಸುತ್ತೇವೆ. ಅವರ ವೇತನದ ಬಗ್ಗೆಯೂ ಚರ್ಚೆ ನಡೆಸಬೇಕಾಗಿದೆ’ ಎಂದು ಎಐಎಫ್ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ಪಿಟಿಐಗೆ ತಿಳಿಸಿದರು.

‘ಜಮೀಲ್ ಮೂರು ವರ್ಷದ ಅವಧಿ ಬಯಸಿದ್ದಾರೆ. ಆದರೆ ಕಾರ್ಯಕಾರಿ ಸಮಿತಿಯ ಕೆಲವು ಸದಸ್ಯರು 1–2 ವರ್ಷ ಇರಲೆಂದು ಹೇಳುತ್ತಿದ್ದಾರೆ. ಆದರೆ ಅದು 2–3 ವರ್ಷ ಇರಲಿದೆ. ಅವರ ನಿರ್ವಹಣೆಯ ಆಧಾರದಲ್ಲಿ ಇರಲಿದೆ’ ಎಂದರು. ಅವರು ಪೂರ್ಣಾವಧಿ ಕೋಚ್ ಆಗಿರಲಿದ್ದಾರೆ ಎಂದೂ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.