ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.5ರಿಂದ ಮಹಿಳೆಯರ ‘ಎ’ ಡಿವಿಷನ್‌ ಫುಟ್‌ಬಾಲ್‌ ಲೀಗ್‌

Published 1 ಫೆಬ್ರುವರಿ 2024, 16:14 IST
Last Updated 1 ಫೆಬ್ರುವರಿ 2024, 16:14 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ಫುಟ್‌ಬಾಲ್‌ ಸಂಸ್ಥೆಯ (ಕೆಎಸ್‌ಎಫ್‌ಎ) ಆಶ್ರಯದಲ್ಲಿ ಮಹಿಳೆಯರ ‘ಎ’ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಇದೇ 5ರಿಂದ ಆರಂಭಗೊಂಡು 27ರವರೆಗೆ ನಡೆಯಲಿದೆ.

ಬೆಂಗಳೂರು ಫುಟ್‌ಬಾಲ್‌ ಮೈದಾನದಲ್ಲಿ ಪಂದ್ಯಗಳು ನಡೆಯಲಿದ್ದು, ಒಟ್ಟು ಎಂಟು ತಂಡಗಳು ಸೆಣಸಲಿವೆ. ಯುನೈಟೆಡ್‌ ಎಫ್‌ಸಿ ಕೊಡಗು, ಪಾಸ್‌ ಎಫ್‌ಸಿ, ಲೆಜೆಂಡ್ಸ್ ಡೆ ಸ್ಪೋರ್ಟಿಂಗ್ ಬೆಂಗಳೂರು, ಯಂಗ್‌ಸ್ಟಾರ್ಸ್ ಎಫ್‌ಸಿ, ಜಿಆರ್‌ಕೆ ಗರ್ಲ್ಸ್ ಎಫ್‌ಸಿ, ಟೆಕ್ನಿಕೋ ಫುಟ್‌ಬಾಲ್ ಫೌಂಡೇಷನ್, ಕೆಂಪ್ ಎಫ್‌ಸಿ ಜೂನಿಯರ್ಸ್ ಮತ್ತು ಸ್ಲಾಮ್ಜರ್ಸ್ ಎಫ್‌ಸಿ ಬೆಳಗಾವಿ ತಂಡಗಳು ಸ್ಪರ್ಧೆಯಲ್ಲಿವೆ.

ಕೊನೆಯ ಆವೃತ್ತಿಯಲ್ಲಿ ವಿಜೇತರಾದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ತಂಡವು 2023–24ರ ಕರ್ನಾಟಕ ಮಹಿಳಾ ಲೀಗ್‌ಗೆ ಬಡ್ತಿ ಪಡೆದಿದೆ. ಕೆಎಸ್‌ಎಫ್‌ಎ ಮಹಿಳೆಯರ ‘ಬಿ’ ಡಿವಿಷನ್‌ ಫುಟ್‌ಬಾಲ್‌ ಲೀಗ್‌ನಲ್ಲಿ ವಿಜೇತ ಕೆಂಪ್‌ ಎಫ್‌ಸಿ ಜೂನಿಯರ್ಸ್‌ ತಂಡವು ‘ಎ’ ಡಿವಿಷನ್‌ಗೆ ಪದೋನ್ನತಿ ಪಡೆದಿದೆ.

ಫೆ.5ರಂದು ಬೆಳಿಗ್ಗೆ 9 ಗಂಟೆಗೆ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಯುನೈಟೆಡ್‌ ಎಫ್‌ಸಿ ಕೊಡಗು ಮತ್ತು ಜಿಆರ್‌ಕೆ ಗರ್ಲ್ಸ್ ಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ. 10.30ರ ಪಂದ್ಯದಲ್ಲಿ ಯಂಗ್‌ಸ್ಟಾರ್ಸ್ ಎಫ್‌ಸಿ– ಸ್ಲಾಮ್ಜರ್ಸ್ ಎಫ್‌ಸಿ ಬೆಳಗಾವಿ ತಂಡಗಳು ಸೆಣಸಲಿವೆ ಎಂದು ಕೆಎಸ್‌ಎಫ್‌ಎ ಕಾರ್ಯದರ್ಶಿ ಎಂ. ಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT