ಶುಕ್ರವಾರ, ಆಗಸ್ಟ್ 12, 2022
26 °C
ಸ್ಪೇನ್ ಎದುರು ಸಮಬಲ ಸಾಧಿಸಿದ ಸಾಧಿಸಿದ ಪೋಲೆಂಡ್‌

ಯೂರೊ ಕಪ್ ಫುಟ್‌ಬಾಲ್ ಟೂರ್ನಿ: ಮಿಂಚಿದ ಲೆವಂಡೊವಸ್ಕಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಸೆವಿಲ್ಲೆ, ಸ್ಪೇನ್‌: ಫಿಫಾ ವರ್ಷದ ಆಟಗಾರ ರಾಬರ್ಟ್‌ ಲೆವಂಡೊವಸ್ಕಿ ಗಳಿಸಿದ ಗೋಲಿನ ನೆರವಿನಿಂದ ಪೋಲೆಂಡ್ ತಂಡವು ಬಲಿಷ್ಠ ಸ್ಪೇನ್ ಎದುರು ಸಮಬಲ ಸಾಧಿಸಿತು. ಯೂರೊ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಉಭಯ ತಂಡಗಳ ನಡುವೆ ಶನಿವಾರ ನಡೆದ ‘ಇ‘ ಗುಂಪಿನ ಪಂದ್ಯವು 1–1ರಲ್ಲಿ ಡ್ರಾ ಆಯಿತು.

ಇದರೊಂದಿಗೆ ಪ್ರೀಕ್ವಾರ್ಟರ್‌ಫೈನಲ್ ತಲುಪುವ ಪೋಲೆಂಡ್ ತಂಡದ ಆಸೆ ಜೀವಂತವಾಗಿದೆ. ಸ್ಪೇನ್‌ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದೆ.

ಓದಿ: 

ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಅಲ್ವಾರ ಮೊರಾಟಾ ಅವರು ಆತಿಥೇಯ ಸ್ಪೇನ್ ತಂಡಕ್ಕೆ ಮುನ್ನಡೆ ತಂದುಕೊಟ್ಟರು. 25ನೇ ನಿಮಿಷದಲ್ಲಿ ಗೆರಾಲ್ಡ್‌ ಮೊರೆನೊ ನೀಡಿದ ಪಾಸ್‌ನೊಂದಿಗೆ ಮುನ್ನುಗ್ಗಿದ ಅವರು ಗೋಲು ಗಳಿಸುವಲ್ಲಿ ಯಶಸ್ವಿಯಾದರು.

ಸಮಬಲ ಸಾಧಿಸುವ ಪೋಲೆಂಡ್ ತಂಡದ ಪ್ರಯತ್ನ ಪಂದ್ಯದ ಮೊದಲಾರ್ಧದಲ್ಲಿ ಫಲಿಸಲಿಲ್ಲ. ಆದರೆ 54ನೇ ನಿಮಿಷದಲ್ಲಿ ಹೆಡರ್‌ ಮೂಲಕ ಗೋಲು ದಾಖಲಿಸಿದ ಲೆವಂಡೊವಸ್ಕಿ ಪ್ರವಾಸಿ ತಂಡದ ಪಾಳಯದಲ್ಲಿ ಸಂಭ್ರಮ ತಂದರು.

ಬಳಿಕ ಎರಡೂ ತಂಡಗಳೂ ಹೋರಾಟ ನಡೆಸಿದರೂ ಗೋಲು ದಾಖಲಾಗಲಿಲ್ಲ.

ಮೊದಲ ಪಂದ್ಯದಲ್ಲಿ ಸ್ಪೇನ್ ತಂಡವು ಸ್ವೀಡನ್ ಎದುರು ಗೋಲುರಹಿತ ಡ್ರಾ ಸಾಧಿಸಿತ್ತು. ಪೋಲೆಂಡ್‌ 1–2ರಿಂದ ಸ್ಲೋವಾಕಿಯಾ ಎದುರು ಮುಗ್ಗರಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು