ಶನಿವಾರ, ಮೇ 30, 2020
27 °C

ವೇತನ ಕಡಿತ ಖಚಿತಪಡಿಸಿದ ಮೆಸ್ಸಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮ್ಯಾಡ್ರಿಡ್: ಕೊರೊನಾ ವೈರಸ್ ಹಾವಳಿಯಿಂದ ಜರ್ಜರಿತವಾಗಿರುವ ಸ್ಪೇನ್ ದೇಶದ ಫುಟ್‌ಬಾಲ್ ಕ್ಲಬ್‌ಗಳು ತನ್ನ ಆಟಗಾರರ ವೇತನ ಕಡಿತ ಮಾಡಲು ಮುಂದಾಗಿವೆ.

ಪ್ರತಿಷ್ಠಿತ ಬಾರ್ಸಿಲೋನಾ ಕ್ಲಬ್‌ ಕೂಡ ಇದೇ ನೀತಿ ಅನುಸರಿಸುತ್ತಿದೆ. ಕ್ಲಬ್‌ನ ಎಲ್ಲ ಆಟಗಾರರ ವೇತನಕ್ಕೆ ಕತ್ತರಿ  ಬೀಳಲಿದೆ ಎಂದು ತಂಡದ ತಾರಾ ಆಟಗಾರ ಲಯೊನೆಲ್ ಮೆಸ್ಸಿ ದೃಢಪಡಿಸಿದ್ದಾರೆ. ಆಡಳಿತ ಮಂಡಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಈಗ ನಮಗೆ ಸಮಯ ಬಂದಿದೆ. ಸುಮಾರು ಶೇ 70ರಷ್ಟು ವೇತನ ಕಡಿತವಾಗುವುದು ಖಚಿತವಾಘಿದೆ. ಇದರೊಂದಿಗೆ ನಾವು ದೇಣಿಗೆಯನ್ನೂ ನೀಡೋಣ. ಅದರಿಂದ ಕ್ಲಬ್‌ ಉದ್ಯೋಗಿಗಳು ತಮ್ಮಸಂಪೂರ್ಣ ವೇತನ ಪಡೆಯುವಂತಾಗುತ್ತದೆ. ತೊಂದರೆಗಳು ಎದುರಾದಾಗಲೆಲ್ಲ ನಾವು ಸಹಾಯಕ್ಕೆ ಧಾವಿಸಿದ್ದೇವೆ. ನಮ್ಮಿಂದಾದ ನೆರವನ್ನು ಯಾವಾಗಲೂ ನೀಡಿದ್ದೇವೆ. ಈಗಂತೂ ತುಂಬಾ ಕ್ಲಿಷ್ಟ ಸಮಯ ಇದೆ. ನಮಗೂ ಏನು ಸಹಾಯ ಮಾಡಬೇಕು ಎಂಬ ಅರಿವು ಇದೆ. ಆದರೆ ಆಡಳಿತ ಮಂಡಳಿಯು ಒತ್ತಾಯಪೂರ್ವಕವಾಗಿ ವೇತನ ಕಡಿತ ಮಾಡಲು ಮುಂದಾಗಿರುವುದು ಮುಜುಗರ ಮೂಡಿಸುತ್ತಿದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಮೆಸ್ಸಿ ಬರೆದಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಕ್ಲಬ್ ಆಟಗಾರರು ಮತ್ತು ಆಡಳಿತ ಮಂಡಳಿಯ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು