ಶನಿವಾರ, ಜನವರಿ 25, 2020
22 °C

ಫುಟ್‌ಬಾಲ್‌: ಇಂಡಿಪೆಂಡೆಂಟ್ಸ್‌ ಎಫ್‌ಸಿಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರ್‌.ಸುಭಾಷ್ ಮತ್ತು ಆರ್‌.ಮರಿಯಾ ನೆಲ್ಸನ್‌ ಗಳಿಸಿದ ತಲಾ ಒಂದು ಗೋಲುಗಳ ಬಲದಿಂದ ಬೆಂಗಳೂರು ಇಂಡಿಪೆಂಡೆಂಟ್ಸ್‌ ಎಫ್‌ಸಿ ತಂಡ ಬಿಡಿಎಫ್‌ಎ ಆಶ್ರಯದ ಸೂಪರ್‌ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಹಣಾಹಣಿಯಲ್ಲಿ ಇಂಡಿಪೆಂಡೆಂಟ್ಸ್‌ ಎಫ್‌ಸಿ 2–1 ಗೋಲುಗಳಿಂದ ಸೌತ್‌ ಯುನೈಟೆಡ್‌ ತಂಡವನ್ನು ಸೋಲಿಸಿತು.

ವಿಜಯೀ ತಂಡದ ಸುಭಾಷ್‌ ಮತ್ತು ನೆಲ್ಸನ್‌ ಅವರು ಕ್ರಮವಾಗಿ 57 ಮತ್ತು 90+2ನೇ ನಿಮಿಷಗಳಲ್ಲಿ ಗೋಲು ಹೊಡೆದರು.

ಸೌತ್‌ ಯುನೈಟೆಡ್‌ ತಂಡದ ರಂಗ್‌ಸಿಂಗ್‌ ಮುಯಿನಾವೊ 42ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು.

ಎಫ್‌ಸಿ ಬೆಂಗಳೂರು ಯುನೈಟೆಡ್‌ ಮತ್ತು ಕಿಕ್‌ಸ್ಟಾರ್ಟ್‌ ಎಫ್‌ಸಿ ಕರ್ನಾಟಕ ನಡುವಣ ದಿನದ ಇನ್ನೊಂದು ಪಂದ್ಯ 2–2 ಗೋಲುಗಳಿಂದ ಸಮಬಲವಾಯಿತು.

ಯುನೈಟೆಡ್‌ ತಂಡದ ಮೊಹಮ್ಮದ್‌ ಅಸ್ರಾರ್‌ ಮತ್ತು ಅಮೇಯ್‌ ಭಟ್ಕಳ್‌ ಅವರು ಕ್ರಮವಾಗಿ 55 ಮತ್ತು 58ನೇ ನಿಮಿಷಗಳಲ್ಲಿ ಗೋಲು ಗಳಿಸಿದರು.

ಕಿಕ್‌ಸ್ಟಾರ್ಟ್‌ ಪರ ವಿಜೋಚಿ ಎಮಾನುಯೆಲ್‌ (64) ಮತ್ತು ಎಡ್ವಿನ್‌ ರೊಸಾರಿಯೊ (90+6) ಕಾಲ್ಚಳಕ ತೋರಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು