ಬೆಂಗಳೂರು: ರಿತು ತಂದುಕೊಟ್ಟ ಮುನ್ನಡೆ ಮತ್ತು ಜ್ಯೋತಿ ಗಳಿಸಿದ ಎರಡು ಗೋಲುಗಳ ನೆರವಿನಿಂದ ಮಾತೃ ಪ್ರತಿಷ್ಠಾನ ತಂಡ ಇಲ್ಲಿ ನಡೆಯುತ್ತಿರುವ ರಾಜ್ಯ ಫುಟ್‌ಬಾಲ್ ಸಂಸ್ಥೆ ಆಶ್ರಯದ ರಾಜ್ಯ ಮಹಿಳಾ ಸೂಪರ್ ಡಿವಿಷನ್ ಲೀಗ್‌ನಲ್ಲಿ ಭರ್ಜರಿ ಜಯ ಗಳಿಸಿತು. ಶುಕ್ರವಾರ ನಡೆದ ಪಂದ್ಯದಲ್ಲಿ ಮಾತೃ ಪ್ರತಿಷ್ಠಾನ 5–1ರಲ್ಲಿ ಸ್ಲ್ಯಾಮಿಜರ್ ಬೆಳಗಾಂ ತಂಡವನ್ನು ಮಣಿಸಿತು.

ಆರನೇ ನಿಮಿಷದಲ್ಲಿ ರಿತು ಗಳಿಸಿದ ಗೋಲಿನೊಂದಿಗೆ ಮಾತೃ ಪ್ರತಿಷ್ಠಾನ ಖಾತೆ ತೆರೆಯಿತು. ನಂತರ ಸುಮಾರು ಅರ್ಧ ತಾಸು ಉಭಯ ತಂಡಗಳು ಗೋಲು ಗಳಿಸಲು ಪರದಾಡಿದವು. 44 ಮತ್ತು 47ನೇ ನಿಮಿಷದಲ್ಲಿ ಜ್ಯೋತಿ ಗಳಿಸಿ ಗೋಲಿನೊಂದಿಗೆ ಮಾತೃ ಪ್ರತಿಷ್ಠಾನದ ಮುನ್ನಡೆ ಹೆಚ್ಚಿತು. 75ನೇ ನಿಮಿಷದಲ್ಲಿ ಸೌಮ್ಯಾ ಗೋಲು ಗಳಿಸಿ ಎದುರಾಳಿಗಳ ಸಂಕಟ ಹೆಚ್ಚಿಸಿದರು.

85ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಸಪ್ನಾ ಅವರು ಸ್ಲ್ಯಾಮಿಜರ್ ತಂಡದ ಏಕೈಕ ಗೋಲು ಗಳಿಸಿದರು. ಪಂದ್ಯ ಮುಕ್ತಾಯದ ಕೊನೆಯ ಹಂತದಲ್ಲಿ ದರ್ಶಿನಿ ಗೋಲು ಗಳಿಸಿ ಮಾತೃ ಪ್ರತಿಷ್ಠಾನದ ಗೆಲುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿದರು.

ಶನಿವಾರ ಮತ್ತು ಭಾನುವಾರ ವಿಶ್ರಾಂತಿ ದಿನವಾಗಿದ್ದು 15ರಂದು ಬೆಳಿಗ್ಗೆ ಒಂಬತ್ತು ಗಂಟೆಗೆ ಪರಿಕ್ರಮ ಎಫ್‌ಸಿ ಮತ್ತು ಬೆಂಗಳೂರು ಬ್ರೇವ್ಸ್ ತಂಡಗಳು ಸೆಣಸಲಿದ್ದು 11 ಗಂಟೆಗೆ ಮಿಸಾಕ ಯುನೈಟೆಡ್ ಎಫ್‌ಸಿ ಮತ್ತು ಬೆಂಗಳೂರು ಸಾಕರ್ ಗ್ಯಾಲಕ್ಸಿ ನಡುವೆ ಪಂದ್ಯ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.