ಲಂಡನ್ (ಎಎಫ್ಪಿ): ಇಂಜುರಿ ಟೈಮ್ನಲ್ಲಿ ರೋಡ್ರಿ ಹೆಮಾಂಜ್ ಗಳಿಸಿದ ಗೋಲಿನ ಬಲದಿಂದ ಮ್ಯಾಂಚೆಸ್ಟರ್ ಸಿಟಿ ತಂಡವು ಇಂಗ್ಲಿಷ್ ಪ್ರೀಮಿಯರ್ ಲೀಗ್ (ಇಪಿಎಲ್) ಫುಟ್ಬಾಲ್ ಟೂರ್ನಿಯಲ್ಲಿ ಜಯಿಸಿತು.

ಶನಿವಾರ ನಡೆದ ಪಂದ್ಯದಲ್ಲಿ ಮ್ಯಾಂಚೆಸ್ಟ ಸಿಟಿ ತಂಡವು 2–1 ರಿಂದ ಅರ್ಸೆನಾಲ್ ವಿರುದ್ಧ ಜಯಿಸಿತು.

ಆರಂಭದಿಂದಲೇ ಉಭಯ ತಂಡಗಳ ನಡುವಣ ಭಾರಿ ಪೈಪೋಟಿ ನಡೆಯಿತು. ಅರ್ಸೆನಲ್ ತಂಡದ ಬುಕಾಯೊ ಸಾಕಾ (31ನೇ ನಿ) ಮೊದಲ ಗೋಲು ಗಳಿಸಿದರು. ಮುನ್ನಡೆ ಗಳಿಸಿದ ತಂಡವು ಎದುರಾಳಿಗಳ ಪ್ರಯತ್ನಗಳಿಗೆ ಅಡ್ಡಗೋಡೆಯಾಗಿ ನಿಂತಿತು.

ಆದರೆ, 57ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶದಲ್ಲಿ ಮ್ಯಾನ್ ಸಿಟಿಯ ರಿಯಾದ್ ಮೆಹರೇಜ್ ಗೋಲು ಗಳಿಸಿದರು. ಸಮಬಲಕ್ಕೆ ಕಾರಣರಾದರು. ನಂತರ ಉಭಯ ತಂಡಗಳ ನಡುವಿನ ಪೈಪೋಟಿ ಮತ್ತಷ್ಟು ಬಿಸಿಯೇರಿತು. 59ನೇ ನಿಮಿಷದಲ್ಲಿ ಅರ್ಸೆನಲ್ನಲ್ಲಿ ಗ್ಯಾಬ್ರಿಯಲ್ ಕೆಂಪು ಕಾರ್ಡ್ ದರ್ಶನ ಮಾಡಿದರು. ಇಂಜುರಿ ಟೈಮ್ನಲ್ಲಿ ರೊಡ್ರಿ (90+3ನಿ) ಗೋಲು ಹೊಡೆದರು. ಇದರೊಂದಿಗೆ ಮ್ಯಾನ್ ಸಿಟಿ ಜಯಭೇರಿ ಬಾರಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.