ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಡೊನಾ ಜರ್ಸಿಗೆ ₹ 70 ಕೋಟಿ!

Last Updated 4 ಮೇ 2022, 19:32 IST
ಅಕ್ಷರ ಗಾತ್ರ

ಲಂಡನ್: ಫುಟ್‌ಬಾಲ್ ದಿಗ್ಗಜ ಡಿಗೊ ಮರಡೊನಾ ‘ದೇವರ ಕೈ’ ಎಂದೇ ಕರೆಯಲಾಗುವ ಪಂದ್ಯದಲ್ಲಿ ಧರಿಸಿದ್ದ ಪೋಷಾಕು ₹ 70 ಕೋಟಿ ಮೌಲ್ಯಕ್ಕೆ ಹರಾಜಾಗಿದೆ.

ಅರ್ಜೆಂಟಿನಾದ ಮರಡೊನಾ 1986ರ ಜೂನ್ 22ರಂದು ನಡೆದ ಫಿಫಾ ವಿಶ್ವಕಪ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ಎರಡು ಗೋಲು ಹೊಡೆದಿದ್ದರು. ಅದರಲ್ಲೊಂದು ಗೋಲು ’ಕುಖ್ಯಾತ’ವಾಗಿತ್ತು. ಆ ಪಂದ್ಯದಲ್ಲಿ ಮರಡೊನಾ ಧರಿಸಿದ್ದ ಪೋಷಾಕಿಗೆ ಬುಧವಾರ ಭಾರಿ ಮೌಲ್ಯ ದೊರೆಯಿತು.

ಏಪ್ರಿಲ್ 20ರಿಂದ ಜೆರ್ಸಿಯ ಬಿಡ್ ಪ್ರಕ್ರಿಯೆ ನಡೆದಿತ್ತು. ಏಳು ಮಂದಿ ಬಿಡ್‌ದಾರರು ಪೈಪೋಟಿ ನಡೆಸಿದರು. ಈ ಜೆರ್ಸಿಯು ಇಂಗ್ಲೆಂಡ್ ತಂಡದ ಮಾಜಿ ಮಿಡ್‌ಫೀಲ್ಡರ್ ಸ್ಟೀವ್ ಹಾಜ್ ಅವರ ಸಂಗ್ರಹದಲ್ಲಿತ್ತು.

‘ಇದೊಂದು ಐತಿಹಾಸಿಕ ಪೋಷಾಕು. 20ನೇ ಶತಮಾನದಲ್ಲಿಯೇ ಇದೊಂದು ಮಹತ್ವದ ಬಿಡ್‌ ಎನಿಸಿಕೊಳ್ಳಲಿದೆ. ಕ್ರೀಡಾ ಸಲಕರಣೆಯ ಹರಾಜಿನಲ್ಲಿಯೇ ಅತ್ಯಂತ ಹೆಚ್ಚು ಮೌಲ್ಯ ಪಡೆದ ದಾಖಲೆ ಇದಾಗಿದೆ’ ಸ್ಟ್ರೀಟ್‌ವೇರ್ ಅ್ಯಂಡ್ ಕಲೆಕ್ಟೆಬಲ್ಸ್ ಸಂಸ್ಥೆ ಮುಖ್ಯಸ್ಥ ಬ್ರಹಾಂ ವಾಚರ್ ಹೇಳಿದ್ದಾರೆ.

2019ರಲ್ಲಿ ನ್ಯೂಯಾರ್ಕ್ ಯಾಂಕೀಸ್ ತಂಡದ ಬೇಬ್ ರುಥ್ ಧರಿಸಿದ್ದ ಪೋಷಾಕು ₹ 43 ಕೋಟಿಗೆ ಹರಾಜಾಗಿದ್ದು ಇದುವರೆಗಿನ ದಾಖಲೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT