ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಲಯೊನೆಲ್‌ ಮೆಸ್ಸಿಗೆ ಗಾಯ

Last Updated 21 ಅಕ್ಟೋಬರ್ 2018, 19:01 IST
ಅಕ್ಷರ ಗಾತ್ರ

ಬಾರ್ಸಿಲೋನಾ: ಬಾರ್ಸಿಲೋನಾ ತಂಡದ ಪ್ರಮುಖ ಆಟಗಾರ ಲಯೊನೆಲ್‌ ಮೆಸ್ಸಿ, ಲಾ ಲಿಗಾ ಫುಟ್‌ಬಾಲ್‌ ಟೂರ್ನಿಯ ಶನಿವಾರದ ಪಂದ್ಯದ ವೇಳೆ ಗಾಯಗೊಂಡಿದ್ದಾರೆ. ಅವರಿಗೆ ವೈದ್ಯರು ಮೂರು ವಾರ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ.

ಕ್ಯಾಂಪ್‌ನುವಾ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಬಾರ್ಸಿಲೋನಾ 4–2 ಗೋಲುಗಳಿಂದ ಸೆವಿಲ್ಲಾ ಎದುರು ಗೆದ್ದಿತು.

12ನೇ ನಿಮಿಷದಲ್ಲಿ ಗೋಲು ಗಳಿಸಿ ಮಿಂಚಿದ ಮೆಸ್ಸಿ, 26ನೇ ನಿಮಿಷದಲ್ಲಿ ಸೆವಿಲ್ಲಾ ತಂಡದ ಫ್ರಾಂಕೊ ವಜಕ್ವೆಜ್‌ ಜೊತೆ ಚೆಂಡಿಗಾಗಿ ಪೈಪೋಟಿ ನಡೆಸುವ ವೇಳೆ ಆಯಾತಪ್ಪಿ ಬಿದ್ದರು. ಬಿದ್ದ ರಭಸಕ್ಕೆ ಅವರ ಬಲಗೈ ಮೂಳೆ ಮುರಿದಿತ್ತು. ನೋವಿನಿಂದ ನರಳುತ್ತಿದ್ದ ಅವರನ್ನು ತಂಡದ ವೈದ್ಯಕೀಯ ಸಿಬ್ಬಂದಿ ಅಂಗಳದಿಂದ ಹೊರಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT