ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಸಿಕೊ|ಸ್ಯಾಂಟೋಸ್ ಲಗುನಾ ತಂಡದ ಎಂಟು ಫುಟ್‌ಬಾಲ್ ಆಟಗಾರರಿಗೆ ಕೋವಿಡ್

Last Updated 21 ಮೇ 2020, 19:45 IST
ಅಕ್ಷರ ಗಾತ್ರ

ಮೆಕ್ಸಿಕೊ ಸಿಟಿ: ಮೆಕ್ಸಿಕೊದ ಪ್ರಮುಖ ಫುಟ್‌ಬಾಲ್ ತಂಡವಾದ ಸ್ಯಾಂಟೋಸ್ ಲಗುನಾದ ಎಂಟು ಮಂದಿ ಆಟಗಾರರಿಗೆ ಕೋವಿಡ್ ಇರುವುದು ದೃಢಪಟ್ಟಿದೆ. ಈ ವಿಷಯವನ್ನು ಕ್ಲಬ್ ಗುರುವಾರ ಬಹಿರಂಗ ಮಾಡಿದೆ. ಇದು, ರಾಷ್ಟ್ರೀಯ ಫುಟ್‌ಬಾಲ್ ಲೀಗ್ ಆಯೋಜಿಸಲು ಸಜ್ಜಾಗಿದ್ದ ಮೆಕ್ಸಿಕೊ ಫುಟ್‌ಬಾಲ್ ಸಂಸ್ಥೆಗೆ ಆಘಾತ ನೀಡಿದೆ.

ಕೊರೊನಾ ಹಾವಳಿಯಿಂದಾಗಿ ಇಲ್ಲಿ ಕ್ರೀಡಾ ಚಟುವಟಿಕೆ ಎರಡು ತಿಂಗಳಿಂದ ಸ್ಥಗಿತಗೊಂಡಿದ್ದು ಕೆಲವೇ ದಿನಗಳಲ್ಲಿ ಮೆಕ್ಸಿಕನ್ ಲೀಗ್ ಆಯೋಜಿಸುವ ಕುರಿತು ಚಿಂತನೆ ನಡೆದಿತ್ತು. ಇದಕ್ಕಾಗಿ ಆಟಗಾರರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಸ್ಯಾಂಟೋಸ್ ಲಗುನಾ ತಂಡದ ಒಟ್ಟು 48 ಆಟಗಾರರ ಮಾದರಿಯನ್ನು ಸಂಗ್ರಹಿಸಲಾಗಿದ್ದು 22 ಮಂದಿಯ ವರದಿ ಮಾತ್ರ ಬಂದಿದೆ. ಇನ್ನಷ್ಟು ಮಂದಿಗೆ ಕೋವಿಡ್ ಇರುವ ಸಾಧ್ಯತೆ ಇದೆ ಎಂದು ಕ್ಲಬ್ ವ್ಯವಸ್ಥಾಪಕ ಅಲೆಗ್ಸಾಂಡ್ರೊ ಇರಗೊರಿ ಆತಂಕ ವ್ಯಕ್ತಪಡಿಸಿದ್ದಾರೆ.

ಗ್ವಡಲಜರ ಮತ್ತು ಮಾಂಟೆರಿ ಕ್ಲಬ್‌ಗಳು ಕೂಡ ಆಟಗಾರರನ್ನು ಪರೀಕ್ಷೆಗೆ ಒಳಪಡಿಸಿದ್ದು ಮಾಂಟೆರಿಯ ಯಾರಿಗೂ ಕೋವಿಡ್ ಇರುವುದು ದೃಢಪಟ್ಟಿಲ್ಲ ಎಂದು ಕ್ಲಬ್ ತಿಳಿಸಿದೆ. ಮೆಕ್ಸಿಕೊದಲ್ಲಿ ಈ ವರೆಗೆ ಆರು ಸಾವಿರಕ್ಕೂ ಹೆಚ್ಚು ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಲ್ಯಾಟಿನ್ ಅಮೆರಿಕದಲ್ಲಿ ಅತಿಹೆಚ್ಚು ಮಂದಿ ಸಾವಿಗೀಡಾದ ಎರಡನೇ ದೇಶವಾಗಿದೆ. ಬ್ರೆಜಿಲ್‌ ಮೊದಲ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT