ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Matija Sarkic: ಮಾಂಟೆನೆಗ್ರೊ ಗೋಲ್ ಕೀಪರ್ ಸರ್ಕಿಕ್ 26ನೇ ವಯಸ್ಸಿನಲ್ಲೇ ನಿಧನ

Published 15 ಜೂನ್ 2024, 14:28 IST
Last Updated 15 ಜೂನ್ 2024, 14:28 IST
ಅಕ್ಷರ ಗಾತ್ರ

ಲಂಡನ್: ಮಾಂಟೆನಿಗ್ರೊ ಮತ್ತು ಮಿಲ್ವಾಲ್ ಗೋಲ್ ಕೀಪರ್ ಮತಿಜಾ ಸರ್ಕಿಕ್ ತಮ್ಮ 26ನೇ ವಯಸ್ಸಿನಲ್ಲಿ ನಿಧನರಾದರು ಎಂದು ಅವರ ಕ್ಲಬ್ ಮತ್ತು ರಾಷ್ಟ್ರೀಯ ಫುಟ್‌ಬಾಲ್‌ ಅಸೋಸಿಯೇಷನ್ ಶನಿವಾರ ಪ್ರಕಟಿಸಿದೆ.

‘ಇಂದು ಮುಂಜಾನೆ ಹಠಾತ್‌ ನಿಧನರಾದರು. ‘ಬ್ರೇವ್ ಫಾಲ್ಕನ್ಸ್’ನ (ಮಾಂಟೆನಿಗ್ರೊ ತಂಡಕ್ಕೆ ಕರೆಯುವ ಹೆಸರು) ಪ್ರೀತಿಯ ಸದಸ್ಯ, ಸದಾ ಹಸನ್ಮುಖಿ’ ಎಂದು ಮಾಂಟೆನಿಗ್ರೊ ಫುಟ್‌ಬಾಲ್ ಸಂಸ್ಥೆ ಸಂದೇಶದಲ್ಲಿ ತಿಳಿಸಿದೆ.

ಗ್ರಿಮ್ಸ್ಬಿಯಲ್ಲಿ ಜನಿಸಿದ ಸರ್ಕಿಕ್, ಮಾಂಟೆನಿಗ್ರೊ ಪರ ಒಂಬತ್ತು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 2019ರಲ್ಲಿ ಬೆಲಾರಸ್ ವಿರುದ್ಧ ಪದಾರ್ಪಣೆ ಮಾಡಿದ್ದರು. ಜೂನ್ 5 ರಂದು ಬೆಲ್ಜಿಯಂ ವಿರುದ್ಧ ಕೊನೆಯ ಸಲ ಸೌಹಾರ್ದ ಪಂದ್ಯದಲ್ಲಿ ಆಡಿದ್ದರು.

ಅವರ ಅವಳಿ ಸಹೋದರ ಆಲಿವರ್, ಅವರು ಮಾಂಟೆನಿಗ್ರೊದ ಚಾಂಪಿಯನ್ ಕ್ಲಬ್‌ ಡೆಸಿಕ್ ಟುಜಿಯ ಮಿಡ್‌ಫೀಲ್ಡರ್‌ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT