ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಮಹಿಳಾ ಲೀಗ್‌: ಸೆಮಿಫೈನಲ್‌ನತ್ತ ಕೆಂಕ್ರೆ

Last Updated 3 ಫೆಬ್ರುವರಿ 2020, 19:23 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬೈನ ಕೆಂಕ್ರೆ ಎಫ್‌ಸಿ ತಂಡ, ನಾಲ್ಕನೇ ರಾಷ್ಟ್ರೀಯ ಮಹಿಳಾ ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಸೋಮವಾರ 3–1 ಗೋಲುಗಳಿಂದ ಕೋಲ್ಕತ್ತದ ಶ್ರೀಭೂಮಿ ಎಫ್‌ಸಿ ತಂಡವನ್ನು ಸೋಲಿಸಿತು. ಈ ಗೆಲುವಿನಿಂದ ಮುಂಬೈನ ತಂಡ ಸೆಮಿಫೈನಲ್‌ ಸ್ಥಾನದತ್ತ ಹೆಜ್ಜೆಯಿಟ್ಟಿದೆ.

ಕೆಂಕ್ರೆ ತಂಡ 9 ಪಾಯಿಂಟ್‌ಗ ಳೊಡನೆ ‘ಬಿ’ ಗುಂಪಿನಲ್ಲಿ ಎರಡನೇ ಸ್ಥಾನದಲ್ಲೇ ಮುಂದುವರಿದಿದೆ. ಶ್ರೀಭೂಮಿ ತಂಡ, ಗುಂಪಿನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು ಸೆಮಿಫೈನಲ್‌ ರೇಸ್‌ನಿಂದ ಹೊರಬಿದ್ದಿದೆ.

ಆಶೋಕನಗರದ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೆಂಕ್ರೆ ತಂಡದ ನಾಯಕಿ ಸೌಮ್ಯಾ ಗುಗ್ಲೋತ್‌ ಎರಡು ಗೋಲುಗಳನ್ನು– ಪಂದ್ಯದ 5 ಮತ್ತು 18ನೇ ನಿಮಿಷ– ಗಳಿಸಿದರೆ, ಆಶಾ ಕುಮಾರಿ 47ನೇ ನಿಮಿಷ ತಂಡದ ಇನ್ನೊಂದು ಗೋಲಿಗೆ ಕಾರಣರಾದರು.

ಶ್ರೀಭೂಮಿ ಪರ ಆರತಿ 33ನೇ ನಿಮಿಷ ಗೋಲು ಹೊಡೆದು ಸೋಲಿನ ಅಂತರ ಕಡಿಮೆ ಮಾಡಿದರು.

ಮೊದಲ ಗೋಲನ್ನು ಹೆಡ್‌ ಮಾಡಿ ಗಳಿಸುವ ಸಂದರ್ಭದಲ್ಲಿ ವಿಭಿನ್ನ ರೀತಿಯಲ್ಲಿ ನೆಲಕ್ಕೆ ಉರುಳಿದರು. ಇದು ಕಳವಳಕ್ಕೆ ಕಾರಣವಾದರೂ ಅವರು ಸಾವರಿಸಿಕೊಂಡು ಆಟ ಮುಂದು ವರಿಸಿದಾಗ ಉಳಿದ ಆಟಗಾರ್ತಿಯರು ನಿಟ್ಟುಸಿರಿಟ್ಟರು, ಪ್ರೇಕ್ಷಕರೂ ಹರ್ಷೋ ದ್ಗಾರ ಮಾಡಿದರು. ಪಂದ್ಯದಲ್ಲಿ ಸ್ಫೂರ್ತಿಯುತ ಆಟವಾಡಿದ್ದಕ್ಕೆ ಸೌಮ್ಯಾ, ಪಂದ್ಯದ ಉತ್ತಮ ಆಟಗಾರ್ತಿ ಪ್ರಶಸ್ತಿ ಪಡೆದರು.

‘ಎ’ ಗುಂಪಿನ ಪಂದ್ಯದಲ್ಲಿ ಎಫ್‌ಸಿ ಕೊಲ್ಹಾಪುರ ತಂಡ 2–0 ಯಿಂದ ಬರೋಡಾ ಎಫ್‌ಎ ತಂಡವನ್ನು ಸೋಲಿಸಿತು. ಲಿಂಗ್‌ನೀಲಂ ಕಿಪ್‌ಜೆನ್‌ 24ನೇ ನಿಮಿಷ, ಸುಭದ್ರಾ ಸಾಃಉ 69ನೇ ನಿಮಿಷ ವಿಜೇತ ತಂಡದ ಪರ ಗೋಲುಗಳನ್ನು ಗಳಿಸಿದರು.

ಇಂದಿನ ಪಂದ್ಯಗಳು

ಬಿಯುಎಫ್‌ಸಿ– ಗೋಕುಲಂ ಎಫ್‌ಸಿ ಮಧ್ಯಾಹ್ನ 12ಕ್ಕೆ

ಒಡಿಶಾ ಎಫ್‌ಸಿ– ಬಿದೇಶ್‌
ಮಧ್ಯಾಹ್ನ 3ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT