ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಮರ್‌ಗೆ ಮೂರು ಪಂದ್ಯಗಳ ನಿಷೇಧ

Last Updated 19 ಜೂನ್ 2019, 19:54 IST
ಅಕ್ಷರ ಗಾತ್ರ

ಪ್ಯಾರಿಸ್‌: ಬ್ರೆಜಿಲ್‌ನ ಸ್ಟಾರ್‌ ಆಟಗಾರ ನೇಮರ್‌, ಮುಂದಿನ ಋತುವಿನಲ್ಲಿ ಚಾಂಪಿಯನ್ಸ್‌ ಲೀಡ್‌ನ ಮೂರು ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ ಎಂದು ಯುಎಎಫ್‌ಎ ಬುಧವಾರ ಖಚಿತಪಡಿಸಿದೆ.

ಪ್ಯಾರಿಸ್‌ ಸೇಂಟ್‌ ಜರ್ಮೈನ್ಸ್ ಮತ್ತು ಮ್ಯಾಂಚೆಸ್ಟರ್‌ ಯುನೈಟೆಡ್‌ ನಡುವಣ ಪಂದ್ಯಕ್ಕೆ ಸಂಬಂಧಿಸಿ ರೆಫ್ರಿಯನ್ನು ಅವಮಾನಿಸಿದ್ದಕ್ಕಾಗಿ ಜಗತ್ತಿನ ಈ ಅತಿ ಶ್ರೀಮಂತ ಆಟಗಾರ ಮೇಲೆ 3 ಪಂದ್ಯಗಳ ನಿಷೇಧ ಹೇರಲಾಗಿದೆ.

ಯುಇಎಫ್‌ಎನ ಶಿಸ್ತು ಸಮಿತಿ ಏಪ್ರಿಲ್‌ನಲ್ಲಿ ನಿಷೇಧ ಹೇರಿತ್ತು. ಇದರ ವಿರುದ್ಧ ಪಿಎಸ್‌ಜಿ ಮನವಿ ಸಲ್ಲಿಸಿತ್ತು. ಆದರೆ ಅದರ ಮನವಿಯನ್ನು ತಿರಸ್ಕರಿಸಲಾಯಿತು. ಬುಧವಾರ ನಿಷೇಧವನ್ನು ಅಧಿಕೃತಗೊಳಿಸಲಾಯಿತು ಎಂದು ಯುಇಎಫ್‌ಎ ತಿಳಿಸಿದೆ.

ಎರಡು ವರ್ಷ ಹಿಂದೆ ₹ 1,733 ಕೋಟಿ ಕೊಟ್ಟು ಪಿಎಸ್‌ಜಿ ತಂಡ ಅವರನ್ನು ಖರೀದಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT